Breaking News

ಮೂವರು ಸ್ಟಾರ್ ನಟರಿಗೆ ಢವ ಢವ!ಮೂವರು ನಟರು ಪದೇ ಪದೇ ಶ್ರೀಲಂಕಾದ ಕ್ಯಾಸಿನೋಗೆ ಭೇಟಿ ನೀಡಿದ್ದಾರೆ.

Spread the love

ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ನಂಟಿನ ಘಾಟು ದಿನೇದಿನೇ ಹೆಚ್ಚಾಗ್ತಾ ಇದೆ. ಸಿಸಿಬಿ ವಿಚಾರಣೆ ವೇಳೆ ನಟಿಯರಾದ ಸಂಜನಾ ಮತ್ತು ನಟಿ ರಾಗಿಣಿ ದೊಡ್ಡದೊಡ್ಡವರ ಹೆಸರು, ರಾಜಕಾರಣಿಗಳ ಮಕ್ಕಳ ಹೆಸರು, ವಿವಿಐಪಿಗಳ ಹೆಸರುಗಳನ್ನ ಹೇಳಿದ್ದಾರೆ ಎನ್ನಲಾಗಿದೆ.

ಇದೀಗ ಚಂದನವನದ ಮೂರು ಸ್ಟಾರ್ ನಟರು ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಒಂದ್ಕಡೆ ವಿಚಾರಣೆ ಎದುರಿಸುತ್ತಿದ್ದಾರೆ. ಇªಬ್ಬರ ಹೇಳಿಕೆಯಿಂದ ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಸ್ಟಾರ್‍ಗಳಿಗೆ ಆತಂಕ ಹೆಚ್ಚಾಗಿದೆ. ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಬಜೆಟ್ ಹೀರೋಗಳಿಗೆ ಡ್ರಗ್ಸ್ ಜಾಲ ಉರುಳಾಗುವ ಸಾಧ್ಯತೆ ಇದೆ. ರಾಗಿಣಿ, ಗಲ್ರಾಣಿ ಅರೆಸ್ಟ್ ಆಗಿರೋ ಬೆನ್ನಲ್ಲೇ ಈಗ ಡ್ರಗ್ಸ್ ಜಾಲದ ಚೆಂಡು ಈ ಮೂವರು ಸ್ಟಾರ್ ಹೀರೋಗಳ ಅಂಗಳದಲ್ಲಿದೆ ಅಂತ ತಿಳಿದು ಬಂದಿದೆ.

ಯಾರು ಮೂವರು ನಟರು?: ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಮೂವರು ನಟರು ಪದೇ ಪದೇ ಶ್ರೀಲಂಕಾದ ಕ್ಯಾಸಿನೋಗೆ ಭೇಟಿ ನೀಡಿದ್ದಾರೆ. ಈ ನಟರ ಓಡಾಟದ ಮಾಹಿತಿ ಜಾರಿ ನಿರ್ದೇಶನಾಲಯಕ್ಕೆ ಲಭ್ಯವಾಗಿದೆ ಎನ್ನಲಾಗಿದೆ.

ಇದರ ನಡುವೆ, ಹಣಕಾಸು ಅವ್ಯವಹಾರ, ಹವಾಲ ದಂಧೆ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಈ ಕಾರಣದಿಂದಾಗಿ, ಎನ್‍ಸಿಬಿ, ಸಿಸಿಬಿ ಜೊತೆಗೆ ಈಗ ಜಾರಿ ನಿರ್ದೇಶನಾಲಯವೂ ಎಂಟ್ರಿಯಾಗಲು ಸಿದ್ಧತೆ ನಡೆಸಿದೆ. ಸ್ಯಾಂಡಲ್‍ವುಡ್ ನಲ್ಲಿ ಹವಾಲಾ ಹಣ ಸದ್ದು ಮಾಡುತ್ತಿದೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.


Spread the love

About Laxminews 24x7

Check Also

ಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು.

Spread the loveಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ