Breaking News

ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ

Spread the love

ಬೆಂಗಳೂರು: ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.

ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇಂದು ಬೆಳ್ಳಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ಮತ್ತು ಆಪ್ತ ರಾಹುಲ್‌ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಆರೋಪ ಏನು?
ಡ್ರಗ್ಸ್‌ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.

ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಪಾರ್ಟಿಗಳಲ್ಲಿ ಏನು ಬಳಕೆ ಆಗುತ್ತಿತ್ತು? ಯಾರೆಲ್ಲ ಬರುತ್ತಿದ್ದರು ಎಂಬುದರ ಬಗ್ಗೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.


Spread the love

About Laxminews 24x7

Check Also

ಹಿಂದಿ ಚಿತ್ರರಂಗದ ಹಿ ಮ್ಯಾನ್ ಇನ್ನಿಲ್ಲ

Spread the love300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ನಟ ಧರ್ಮೇಂದ್ರ (Dharmendra) ಅವರು ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ