ದುಬೈ: ಐಪಿಎಲ್ 13 ರ ವೇಳಾಪಟ್ಟಿ ಶನಿವಾರ ಪ್ರಕಟಗೊಳ್ಳುವ ಸಾಧ‍್ಯತೆಯಿದ್ದು, ಈ ಹಿಂದೆ ನಿಗದಿಯಾದಂತೆ ಮೊದಲ ಪಂದ್ಯ ಚೆನ್ನೈ ಮತ್ತು ಮುಂಬೈ ನಡುವೆಯೇ ನಡೆಯುವ ಸಾಧ‍್ಯತೆಯಿದೆ.
ಚೆನ್ನೈ ತಂಡದಲ್ಲಿ ಕೊರೋನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜತೆ ಸಿಎಸ್ ಕೆ ಆಡುವುದು ಅನುಮಾನ ಎಂಬ ಸುದ್ದಿ ಹಬ್ಬಿತ್ತು. ಆದರೆ ಮೂಲಗಳ ಪ್ರಕಾರ ಈ ಹಿಂದೆ ನಿಗದಿಯಾದಂತೇ ಪಂದ್ಯಗಳು ನಡೆಯಲಿವೆ. ಹೊಸದಾಗಿ ಕೊರೋನಾ ಪ್ರಕರಣ ಕಂಡುಬರದ ಹಿನ್ನಲೆಯಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ‍್ಯತೆ ಕಡಿಮೆ. ಶನಿವಾರ ಬಿಸಿಸಿಐ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಲಿದ್ದು, ಅದರಿಂದ ಎಲ್ಲವೂ ತಿಳಿದುಬರಲಿದೆ.
Laxmi News 24×7