ಬೆಂಗಳೂರು : ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾ ಜೋಡಿಗಳಾದ ‘ರಾಕಿಂಗ್ ಸ್ಟಾರ್’ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎರಡನೇ ಮಗು ಹುಟ್ಟಿ ಹತ್ತು ತಿಂಗಳ ಬಳಿಕ ಇದೀಗ ಸರಳವಾಗಿ ನಾಮಕರಣವನ್ನು ಮಾಡಿ ಯಥರ್ವ್ ಯಶ್ ಎಂದು ಹೆಸರನ್ನಿಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೇ, ಶೀಘ್ರದಲ್ಲೇ ಮಗನ ಹೆಸರನ್ನು ಬಹಿರಂಗಪಡಿಸಲಾಗುವುದು’ ಎಂದು ರಾಧಿಕಾ ತಿಳಿಸಿದ್ದರು. ಇದೀಗ ಅಧಿಕೃತವಾಗಿ ‘ಯಥರ್ವ್ ಯಶ್’ ಎಂಬ ಹೆಸರನ್ನು ಘೋಷಣೆ ಮಾಡಿದ್ದಾರೆ.
ಸರಳ ಸಮಾರಂಭದಲ್ಲಿ ಶಾಸ್ತ್ರೋಕ್ತವಾಗಿ ನಡೆದಿರುವ ಈ ನಾಮಕರಣದ ಕ್ಯೂಟ್ ವಿಡಿಯೋ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಯಶ್ ದಂಪತಿ.