Breaking News

ರೌಡಿಸಂಗೆ ಹುಬ್ಬಳ್ಳಿ ಜನರ ತತ್ತರ

Spread the love

ಹುಬ್ಬಳ್ಳಿ- ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅರುಣ ಹಚಡದ ಎಂಬುವರ ಮೇಲೆ ರೌಡಿಗಳನ್ನು ಕರೆದುಕೊಂಡು ಮಾರಕಾಸ್ತ್ರಗಳಿಂದ ಮನೆಗೆ ಬಂದು ಆವಾಜ್ ಹಾಕುವ ದ್ರಶ್ಯಗಳು ಸಿಸಿ ಟಿವಿಯಲ್ಲಿ ದೃಶ್ಯಗಳು ಕಂಡು ಬಂದಿವೆ. ಇನ್ನು ಇದರ ಬಗ್ಗೆ ಸಂಬಂದಿಸಿದ ಹಾಗೆ ಕಮರಿಪೇಟ್ ಪೊಲೀಸ್ ಠಾಣೆಗೆ ದೂರನ್ನು ಕೊಡಲು ಹೋದ್ರು ಕೂಡಾ, ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂದು ಸಂತ್ರಸ್ತ ಅರುಣ್ ಮಾಧ್ಯಮದವರ ಮುಂದೆ ತಮಗೆ ಆಗುವ ಅನ್ಯಾಯದ ಬಗ್ಗೆ ಹೇಳಿದರು.

ಯಲ್ಲಪ್ಪ ಬದ್ದಿ ಹಾಗೂ ಅವನ ಸಹಚರರು ಮನೆಯ ಮುಂದೆ ಮಾರಕಾಸ್ತ್ರಗಳು ಹಾಗೂ ಕಟ್ಟಿಗೆಗಳಿಂದ ಹಲ್ಲೇ ಮಾಡಲು ಮುಂದಾಗಿದ್ದಾರೆ, ಇಷ್ಟೆಲ್ಲ ಸಾಕ್ಷಿಗಳು ಇದ್ದರು ಕೂಡಾ ಕಮರಿಪೇಟ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ನಮಗೆ ನ್ಯಾಯ ಕೊಡಿಸಬೇಕಾದ ಪೊಲೀಸರಿಂದ ನಮಗೆ ನ್ಯಾಯ ಸಿಗುತ್ತಿಲ್ಲ.

ಇನ್ನು ರಾಜಿ ಪಂಚಾಯ್ತಿ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ನಮಗೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.‌.‌.


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ