*ಹಾಡಾಹಗಲೇ ಮಂಗಸೂಳಿಯಲ್ಲಿ ಮರಳು ಮಾಫಿಯಾ ದಂಧೆ ಕೇಳೊರಿಲ್ಲಾ ಹೇಳೊರಿಲ್ಲಾ*
.
ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಹೊರವಲಯದ ಅಗ್ರಾಣಿ ಹಳ್ಳವನ್ನು ಅಗೆದು ಹಾಗೂ ಅದರ ಸಮೀಪದ ಫಲವತ್ತಾದ ಕೃಷಿ ಭೂಮಿಯನ್ನು ಅಗೆದು ಮರಳನ್ನು ಸಾಗಿಸುವ ಕೃತ್ಯಕ್ಕೆ ಯಾರೂ ಬ್ರೇಕ್ ಹಾಕದ ಕಾರಣ ಹಾಡಾಹಗಲೇ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ ಇದನ್ನು ಕೇಳೊರಿಲ್ಲ ಹೇಳೋರಿಲ್ಲ ಎಂಬಂತಾಗಿದೆ
ಸರ್ವೇ ನಂಬರ್ ೧೪೫ರ ಆಸ್ತಿಯಲ್ಲಿ ಮರಳು ತೆಗೆಯುತ್ತಿದ್ದು ಇದನ್ನ ಕೆಳಲು ಯಾವೋಬ್ಬ ಅಧಿಕಾರಿಯೂ ಇತ್ತ ಕಡೆ ಸುಳಿದೇ ಇಲ್ಲ.
ತಾಲೂಕಾ ದಂಡಾಧಿಕಾರಿ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಈ ಬಗ್ಗೆ ಗಮನಹರಿಸದೇ ಇರುವದು ಅನುಮಾನಕ್ಕೀಡು ಮಾಡಿದೆ
ಹಗಲು ರಾತ್ರಿ ಟ್ರ್ಯಾಕ್ಟರ್ ಮರಳು ತುಂಬಿ ಸಾಗಿಸುತ್ತಿದ್ದರೂ ಕಣ್ಣಿದ್ದು ಕುರುಡರಂತೆ ಜಾಣಮೌನವಹಿಸಿದ್ದಾರೆ.
ಜಮೀನಿನ ಮಾಲಿಕ ತನ್ನ ಮನೆ ಕಟ್ಟಲಿಕ್ಕೆ ಮರಳು ತೆಗೆಯುತ್ತಿರುವದಾಗಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾನೆ ಆದರೆ ಮರಳು ತೆಗೆಯಲು ಇತನಿಗೆ ಅನುಮತ್ತಿ ನೀಡಿದ್ದಾದರು ಯಾರು? ಎಂಬ ಪ್ರಶ್ನೆ ಮೂಡಿದೆ
ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದಷ್ಟ ಗೊತ್ತಾಗಬೇಕಿದೆ
ಮರಳು ಬೇರೆ ಬೇರೆ ಊರಿಗೆ ಹೆಚ್ಚಿನ ಬೆಲೆಗೆ ಸಾಗಾಟ ಮಾಡುತ್ತಿದ್ದಾರೆ.
ಜಮೀನು ಮಾಲಿಕ ತನ್ನ ಮನೆಕಟ್ಟಲಿಕ್ಕೆ ಹೇಳಿ ಹಲವಾರು ಹಳ್ಳಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಮರಳನ್ನು ಸಾಗಿಸುವ ಎಲ್ಲ ಸಾಕ್ಷ್ಯಗಳು ದೊರೆತ್ತಿದ್ದು ಇದು ಹಲವು ವರ್ಷಗಳಿಂದ ನಡೆಯುತ್ತಿರುವ ಮರಳು ಮಾಫಿಯಾ ಎಂಬುದು ಸಾಬೀತಾಗಿದೆ
ಭೂಮಿ ತಾಯಿಯ ಒಡಲನ್ನು ಅಗೆದು ಮರಳು ಮಾಫಿಯಾ ದಂದೆಕೋರರನ್ನು ಹಿಡಿದು ಯಾವ ಶಿಕ್ಷೆ ನೀಡುತ್ತಾರೋ ಅಥವಾ ಲಂಚಕ್ಕೆ ಕೈಯೊಡ್ಡಿ ಮರಳು ಸಾಗಿಸುವವರ ಜೊತೆ ಕೈಜೋಡಿಸುತ್ತಾರೋ ಈಗಷ್ಟೆ ತಿಳಿಯಬೆಕಿದೆ
ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಾಗಿ ಭರವಸೆ ನೀಡಿದ್ದಾರೆ ಆದರೆ ಅದು ಎಷ್ಟರಮಟ್ಟಿಗೆ ಕ್ರಮಜರುಗಿಸಲಾಗುತ್ತಿದೆ ಎಂದು ಕಾಯ್ದುನೋಡಬೇಕಾಗಿದೆ.
ಈ ವರದಿ ನೋಡಿಯಾದರು ತಾಲೂಕಾಡಳಿತ ಎಚ್ಚೆತ್ತುಕೊಂಡು ಈ ಹಗಲು ದರೋಡೆಕೋರರನ್ನು ಬಂಧಿಸುತ್ತಾರೆ ನೋಡಬೇಕು