.

ಧಾರವಾಡ: ಬೆಳಗಾವಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಯಾವ ಜಾತಿಯವನು ಎಂಬುದು ಮುಖ್ಯ ಅಲ್ಲ, ಯಾವುದಕ್ಕೆ ಹೋರಾಟ ಮಾಡಿದ ಅನ್ನೋದು ಮುಖ್ಯ. ರಾಯಣ್ಣ ಜಾತಿಗಾಗಿ, ಗಡಿಗಾಗಿ ಹೋರಾಟ ಮಾಡಿದ್ದಲ್ಲ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಾಯಕ, ಅಂತಹವನಿಗೆ ಅಪಮಾನ ಮಾಡುತ್ತಿರುವುದು ದೇಶದ ಭಕ್ತರಿಗೆ ಅಪಮಾನ ಎಂದರು.

ಈ ರೀತಿಯ ಮಹಾಪುರುಷರಿಗೆ, ಜಾತಿ ಬಣ್ಣ ಬಳೆಯುವವರಿಗೆ ನಾಚಿಕೆಯಾಗಬೇಕು. ನಿಮ್ಮ ಸ್ವಾರ್ಥಕ್ಕಾಗಿ ಇವರನ್ನು ರಾಜಕೀಯ ದಾಳಕ್ಕೆ ಬಳಸಬೇಡಿ ಎಂದು ಕಿಡಿಕಾರಿದರು. ರಾಯಣ್ಣನನ ಪ್ರತಿಮೆಯನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು, ಜ್ವಾಲಾಮುಖಿ ಏಳುವ ಮೊದಲು ಪ್ರತಿಮೆ ಸ್ಥಾಪನೆ ಮಾಡಬೇಕು. ನೀವು ಜಾತಿ, ರಾಜಕೀಯ ಬಣ್ಣ ಬಳಿದರೆ ನಾವು ನಂದಗಡದಿಂದ ಪೀರನವಾಡಿ ಚಲೋ ಕರೆ ಕೊಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
Laxmi News 24×7