ಯಾದಗಿರಿ: ಎಷ್ಟೋ ಜನ ಒಂದು ಮಗು ಆಗಲಿ ಅಂತ ಹತ್ತಾರು ದೇವರಿಗೆ ವರ ಬೇಡಿಕೊಳ್ಳತಾರೆ. ಇದರಲ್ಲಿ ಕೆಲವರಿಗೆ ದೇವರು ವರ ಕೊಟ್ಟ್ರೆ, ಇನ್ನೂ ಕೆಲವರಿಗೆ ಕೊನೆಯವರೆಗೂ ಮಕ್ಕಳ ಭಾಗ್ಯ ಕರುಣಿಸುವುದಿಲ್ಲ. ಆದರೆ ಇಲ್ಲೊಬ್ಬಳು ಮಹಾ ತಾಯಿ ಏಕಕಾಲದಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾಳೆ
ಅದು ಮೊದಲನೆಯ ಹೆರಿಗೆಯಾಗಿ ಬರೊಬ್ಬರಿ 8 ವರ್ಷದ ಬಳಿಕ ಮೂರು ಗಂಡು ಮಕ್ಕಳಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಜಿಲ್ಲೆಯ ರಾಮಸಮುದ್ರದ ನಿವಾಸಿಯಾಗಿರುವ ಪದ್ಮಾ, ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ಮಕ್ಕಳು ಮತ್ತು ತಾಯಿ ನಾಲ್ವರು ಸುರಕ್ಷಿತವಾಗಿದ್ದಾರೆ. ಸರಿಯಾದ ಸಮಯಕ್ಕೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ರಾಮಸಮುದ್ರ ಆಶಾ ಕಾರ್ಯಕರ್ತೆಯರಾದ ಮುತ್ತಮ್ಮ, ಮಂಗಳಮ್ಮ, ಗೌರಮ್ಮ ಪದ್ಮಾಳನ್ನು, ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಪದ್ಮಾ ಇಂದು ಮಧ್ಯಾಹ್ನ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸಹಾಯಕ್ಕಾಗಿ ಕೈ ಚಾಚಿದ ಪದ್ಮಾ ಕುಟುಂಬ:
ಪದ್ಮಾ ಕುಟುಂಬಕ್ಕೆ ಒಂದು ಕಡೆ ಸಂತೋಷ ಮತ್ತೊಂದೆಡೆ ಆತಂಕ ಶುರುವಾಗಿದೆ. ಕಡು ಬಡತನದಲ್ಲಿರುವ ಪದ್ಮಾ ಕುಟುಂಬ, ಸದ್ಯ ಹೆರಿಗೆಯ ಖರ್ಚು ವೆಚ್ಚ ಭರಿಸಲು ಒದ್ದಾಡುತ್ತಿದೆ. ಇನ್ನೂ ಮೂರು ಮಕ್ಕಳ ಮುಂದಿನ ಲಾಲನೆ, ಪಾಲನೆ ನೆನಪಿಸಿಕೊಂಡು ಪೆಚಾಡುತ್ತಿದೆ. ಪದ್ಮಾ ಮತ್ತು ನಾಗರಾಜ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಕೊರೊನಾ ಭಯದಿಂದ ಸ್ವಂತ ಗ್ರಾಮ ರಾಮಸಮುದ್ರಕ್ಕೆ ವಾಪಸು ಆಗಿದ್ದಾರೆ. ಸದ್ಯ ಪದ್ಮಾ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸಹಾಯ ಹಸ್ತಚಾಚಿದೆ.