Breaking News

ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ರಾಜಕೀಯ ಮುಖಂಡ ಸಾವು

Spread the love

ಕನಕಗಿರಿ   : ಆರು ದಶ​ಕ​ಗಳಿಂದ ಜತೆಗಿದ್ದ ಜೀವನಸಂಗಾತಿ ಬುಧವಾರ ತಡರಾತ್ರಿ ಏಕಾಏಕಿ ಹೃದಯಾಘಾತದಿಂದ ಮರಣ ಹೊಂದಿದ ಸುದ್ದಿ ಕೇಳಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪತಿಯೂ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಘಟನೆ ಪಟ್ಟಣದಲ್ಲಿ ನಡೆದಿದೆ.

ಬಾಡಿಗೆಗೆ ಲೋಡ್‌ ಕೊಡದ್ದಕ್ಕೆ ಚೂರಿಯಿಂದ ಇರಿದು ಹತ್ಯೆ…

ಪಟ್ಟಣದ ಹಿರಿಯ ರಾಜಕಾರಣಿ, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಮಹಾಬಳೇಶ್ವರ ಸ್ವಾಮಿ ಕಲುಬಾಗಿಲಮಠ (83), ಪತ್ನಿ ಪ್ರಭಾವತಿ (78) ಮೃತರು. ಬುಧವಾರ ತಡರಾತ್ರಿ 12.15ಕ್ಕೆ ಪ್ರಭಾವತಿ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬದವರು ದುಃಖದಲ್ಲೇ ಅಂತ್ಯಸಂಸ್ಕಾರದ ವಿಧಿ-ವಿಧಾನಗಳಲ್ಲಿ ತೊಡಗಿಸಿಕೊಂಡಿದ್ದರು.

ಮಗುವಿನ ತಂದೆ ವಿಚಾರದಲ್ಲಿ ದಂಪತಿ ಮಧ್ಯೆ ಜಗಳ: ಮಗುವನ್ನು ಬಾವಿಗೆಸೆದ ತಾಯಿ..

ಪತ್ನಿ ಸಾವಿನಿಂದಾಗಿ ನೊಂದ ಮಹಾಬಳೇಶ್ವರ ಸ್ವಾಮಿ ಅವರೂ ಗುರುವಾರ ಬೆಳಗ್ಗೆ 6ಕ್ಕೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ತಂದೆ-ತಾಯಿ ಅಂತ್ಯಸಂಸ್ಕಾರಕ್ಕೆ ಕೊನೆ ಮಗ ಹಾಗೂ ಮೊಮ್ಮಕ್ಕಳು ವಿಡಿಯೋ ಕಾಲ್‌ ಮೂಲಕವೇ ಅಂತಿಮ ದರ್ಶನ ಪಡೆದರು.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ