ರಾಯಚೂರು : ಆಭರಣಕ್ಕಾಗಿ ಚಿನ್ನವನ್ನು ಗಣಿಯಿಂದ ತೆಗೆಯಬೇಕು, ಈ ಚಿನ್ನವನ್ನು ತೆಗೆಯುವುದರಿಂದಾಗಿ ಈ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ ಇವರ ಮನೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ. ಇವರ ಭೂಮಿಯಲ್ಲಿಯ ನೀರು ವಿಷವಾಗಿದೆ, ಈ ಮಧ್ಯೆ ಚಿನ್ನಕ್ಕಾಗಿ ಭೂಮಿ ನೀಡಿದ ಗ್ರಾಮದ ಎಲ್ಲರಿಗೂ ಉದ್ಯೋಗ ನೀಡಿ ಎಂದು ಆಗ್ರಹಿಸಿ ಕಳೆದ ಆರು ದಿನಗಳಿಂದ ಧರಣಿ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಚಿನ್ನವನ್ನು ಹೊರತೆಗೆಯುವ ಗಣಿಗಾರಿಕೆ ಇರುವುದು ಈಗ ಕೇವಲ ಹಟ್ಟಿ ಚಿನ್ನದ ಗಣಿಯಲ್ಲಿ ಮಾತ್ರ, ಹಟ್ಟಿ ಸುತ್ತಮುತ್ತ ಆಳದಲ್ಲಿರುವ ಚಿನ್ನವನ್ನು ತೆಗೆದು ಬಂಗಾರ ಪ್ರಿಯರಿಗೆ ನೀಡಲಾಗುತ್ತಿದೆ. ಅತ್ಯಂತ ಬೆಲೆಬಾಳುವ ಚಿನ್ನವನ್ನು ಇಷ್ಟ ಪಡದೆ ಇರುವವರು ಯಾರಿದ್ದಾರೆ ಹೇಳಿ, ಆದರೆ ಈ ಚಿನ್ನದ ಗಣಿಗಾರಿಕೆಯಿಂದಾಗಿ ಈ ಗ್ರಾಮಸ್ಥರು ನರಳಾಡುವಂತಾಗಿದೆ.
ಇದು ಮಾನವಿ ತಾಲೂಕಿನ ಹೀರಾ ಬುದ್ದಿನ್ನಿ ಗ್ರಾಮ, ಈ ಗ್ರಾಮಕ್ಕೆ ಹೊಂದಿಕೊಂಡೆ ಹಟ್ಟಿ ಚಿನ್ನದ ಗಣಿ ಕಂಪನಿ ಚಿನ್ನಕ್ಕಾಗಿ ಅದಿರು ತೆಗೆಯುತ್ತಿದೆ. ಗಣಿಗಾರಿಕೆಯಲ್ಲಿ ಭಾರಿ ಪ್ರಮಾಣದ ಸ್ಪೋಟಕಗಳನ್ನು ಬಳಸುವುದರಿಂದ ಬುದ್ದಿನ್ನಿ ಗ್ರಾಮದ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ. ಅಲ್ಲದೆ ಇವರು ಕುಡಿವ ನೀರಿನ ಕೊಳವೆ ಬಾವಿಯಲ್ಲಿ ಆರೆಸೆನಿಕ್ ಎಂಬ ವಿಷವಿದೆ ಎಂಬ ವರದಿ ಇದೆ, ಇವುಗಳ ಮಧ್ಯೆ ಆಳವಾದ ಗಣಿಗಾರಿಕೆ ಮಾಡುತ್ತಿರುವದರಿಂದ ಈ ಗ್ರಾಮದ ಸುತ್ತಮುತ್ತಲಿನ ಅಂತರ್ಜಲ ಬತ್ತಿ ಹೋಗಿದೆ, ಹಳ್ಳ ಕೊಳ್ಳಗಳಲ್ಲಿ ನೀರು ಇಲ್ಲದೆ ಸಂಪೂರ್ಣವಾಗಿ ಬರಡಾಗಿದೆ. ಇದಕ್ಕೆಲ್ಲ ಕಾರಣ ಚಿನ್ನದ ಗಣಿಗಾರಿಕೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅದಕ್ಕಾಗಿ ನಮ್ಮನ್ನು ಸ್ಥಾಳಾಂತರಿಸಿ ನಮ್ಮ ಭೂಮಿಯು ಬರಡಾಗಿದ್ದರಿಂದ ಇಡೀ ಗ್ರಾಮದ ಪ್ರತಿಯೊಬ್ಬರ ಕುಟುಂಬದಲ್ಲಿಯೂ ಒಂದೊಂದು ಉದ್ಯೋಗ ನೀಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಂಜನಗೂಡು ಟಿಎಚ್‌ಒ ಆತ್ಮಹತ್ಯೆ ಪ್ರಕರಣ: ಜಿ.ಪಂ. ಸಿಇಒ ಮೇಲೆ ಎಫ್‌ಐಆರ್; ವರ್ಗಾವಣೆ
ಕಳೆದ ಆರು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ, ಈ ಹೋರಾಟ ಇನ್ನಷ್ಟು ತೀವ್ರಗೊಳಿಸಲು ಗ್ರಾಮಸ್ಥರು ತೀರ್ಮಾನಿಸಿದ್ದರು, ಮುಂದಿನ ದಿನಗಳಲ್ಲಿ ನಮಗೆ ಉದ್ಯೋಗ ನೀಡದೆ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಹಟ್ಟಿ ಚಿನ್ನದ ಗಣಿಯ ಕಾರ್ಯನಿರ್ವಹಕಾಧಿಕಾರಿ ಇಲ್ಲಿ ಭಾರೀ ಸ್ಪೋಟಕಗಳನ್ನು ಬಳಸುತ್ತಿಲ್ಲ, ವಿಜ್ಞಾನಿಗಳು ಮಾರ್ಗಸೂಚಿಯಂತೆ ಸ್ಪೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎನ್ನುವುದಕ್ಕೆ ಆಗುವುದಿಲ್ಲ.
ಇವುಗಳು ಹಳೆಯ ಮನೆಗಳಾಗಿದ್ದರಿಂದ ಬಿರುಕು ಬಿಡುತ್ತಿವೆ,ಅಲ್ಲದೆ ಇಲ್ಲಿ ಎಷ್ಟು ವರ್ಷ ಚಿನ್ನ ತೆಗೆಯಬಹುದು ಎನ್ನುವ ಎಷ್ಟು ಕೆಲಸಗಾರರನ್ನು ತೆಗೆದುಕೊಳ್ಳಬೇಕು ಎಂಬ ತಜ್ಞರ ವರದಿ ನೀಡಲಾಗುವುದು ಎಂದು ಹೇಳಿದ್ದಾರೆ, ಬುದ್ದಿನ್ನಿ ಗ್ರಾಮದಲ್ಲಿರುವ ಗಣಿಯಿಂದ ನಿತ್ಯ 325 ಗ್ರಾಂ ಚಿನ್ನವನ್ನು ತೆಗೆಯಲಾಗುತ್ತಿದೆ, ಇಲ್ಲಿ ಇನ್ನೂ ಮೂವತ್ತು ವರ್ಷ ಗಣಿಗಾರಿಕೆ ಮಾಡಬಹುದು ಎಂಬ ವರದಿ ಇದೆ, ಇದಕ್ಕೆ ಸರಕಾರದಿಂದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.