ಬೆಂಗಳೂರು: ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ವೃದ್ಧನ ಶವವನ್ನು ಕುಟುಂಬಸ್ಥರು ಸೈಕಲ್ ನಲ್ಲಿ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ ಘಟನೆಗೆ ಕುರಿತು, ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಎಲ್ಲಿದೆ ನಿಮ್ಮ ಸರ್ಕಾರ ?. ಅವರಿಗೆ ಏಕೆ ಆ್ಯಂಬುಲೇನ್ಸ್ ಒದಗಿಸಲಿಲ್ಲ. ?
ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪಿಡುಗು ಪರಿಸ್ಥಿತಿಯನ್ನು ನಿಭಾಯಿಸಿಲು ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸೈಕಲ್ ನಲ್ಲಿ ಶವವನ್ನು ತಳ್ಳಿಕೊಂಡು ಹೋಗುತ್ತಿರುವ ಪೋಟೋ ಸಮೇತ ಪೋಸ್ಟ್ ಮಾಡುವ ಮೂಲಕ ರಾಜ್ಯ ಸರ್ಕಾರದಕ್ಕೆ ಹರಿಹಾಯ್ದಿದ್ದಾರೆ.