Breaking News

ರೌಡಿಶೀಟರ್ ಇರ್ಫಾನ್ ಹತ್ಯೆ- ಐವರು ಆರೋಪಿಗಳು ಅರೆಸ್ಟ್‌

Spread the love

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬೀಳಿಸಿದ ಶೂಟೌಟ್ ಪ್ರಕರಣವನ್ನು ಬೆನ್ನಟ್ಟಿದ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಧಾರವಾಡ ಫ್ರೂಟ್ ಇರ್ಫಾನ್ ಎಂಬುವ ರೌಡಿಶೀಟರ್ ಅನ್ನು ಹಳೇ ಹುಬ್ಬಳ್ಳಿ ಅಲ್ತಾಜ್ ಸಭಾ ಭವನ ಬಳಿ ಆಗಸ್ಟ್ 6ರಂದು ಗುಂಡಿನ ಮಳೆಗೆರೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಎಸ್ಕೇಪ್ ಆಗಲು ನೆರವಾಗಿದ್ದ ಮತ್ತು ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.ಬುಲೆಟ್ ಚಲಾಯಿಸಿದ ಧಾರವಾಡದ ಅಫ್ತಾಬ್ ಬೇಪಾರಿ, ಡಿಯೋ ಚಲಾಯಿಸಿದ ತೌಸೀಫ್, ಕಾರು ಚಾಲನೆ ಮಾಡಿದ್ದ ಅಮೀರ್ ತಮಟಗಾರ, ಆರೋಪಿಗಳಿಗೆ ಹಣ ನೀಡಿದ್ದನೆನ್ನಲಾಗಿರುವ ಮೊಹೀನ್ ಪಟೇಲ್ ಹಾಗೂ ಇನ್ನೊಬ್ಬ ಅತಿಯಾಬಖಾನ್ ತಡಕೋಡ ನನ್ನು ಬಂಧಿಸಲಾಗಿದೆ. ಫ್ರೂಟ್ ಇರ್ಫಾನ್ ಮೇಲೆ ಗುಂಡು ಹಾರಿಸಿದವರು ಮುಂಬೈನಿಂದ ಬಂದಿದ್ದ ಬಾಡಿಗೆ ಹಂತಕರು ಎನ್ನಲಾಗಿದೆ. ಅವರು ಪರಾರಿಯಾಗಿದ್ದು, ಅವರನ್ನು ಹಿಡಿಯಲು ಶೋಧ ಮುಂದುವರಿದಿದೆ.

ಹತ್ಯೆಗೈದು ಪರಾರಿಯಾಗಲು ನೆರವಾದ ಸ್ಥಳೀಯ ತಂಡಕ್ಕೆ ಮೊಮಿನ್ 3 ಲಕ್ಷ ರೂ. ಹಾಗೂ ಮುಂಬೈನಿಂದ ಬಂದಿದ್ದ ಹಂತಕರಿಗೆ 5 ಲಕ್ಷ ರೂ.ಗಳನ್ನು ನೀಡಿದ್ದನು ಎಂದು ಹೇಳಲಾಗಿದೆ. ಕೃತ್ಯಕ್ಕೆ ಬಳಕೆಯಾಗಿದ್ದ 2 ಬೈಕ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ