ಬೆಂಗಳೂರು: ಮಣಿಪಾಲ್ ಆಸ್ಪತ್ರೆ ರಾಜ್ಯ ರಾಜಕಾರಣದ ಕೇಂದ್ರ ಬಿಂದು ಆಗಿದೆ. 24 ಗಂಟೆಯ ಅಂತರದಲ್ಲಿ ಇಡೀ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ. ಯಾಕಂದ್ರೆ ಇದೇ 24 ಗಂಟೆಯ ಅಂತರದಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಪ್ರಭಾವಿ ರಾಜಕೀಯ ನಾಯಕರು ಇದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಒಂದೇ ಆಸ್ಪತ್ರೆಯಷ್ಟೇ ಅಲ್ಲ ಒಂದೇ ಫ್ಲೋರ್ನಲ್ಲಿದ್ದಾರೆ. ಅದ್ರಲ್ಲೂ ಒಂದೇ ಸಾಲಿನಲ್ಲಿರೋ ರೂಮ್ ಸೇರಿಕೊಂಡಿದ್ದಾರೆ. ಕೂಗಳತೆಯಲ್ಲ ಕಣ್ಣಳತೆಯಷ್ಟು ಸಮೀಪದಲ್ಲಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಕಟ್ಟಿಸಿದ ಹೊಸ ಐಸೋಲೇಷನ್ ವಾರ್ಡ್ ಈ ಇಬ್ಬರು ನಾಯಕರ ಎಂಟ್ರಿ ಮೂಲಕವೇ ಉದ್ಘಾಟನೆಯಾಗಿದೆ. ಕೊರೊನಾ ಸೋಂಕಿತರಿಗೆ ಅಂತ ವಿಶೇಷವಾಗಿ ಕಟ್ಟಿಸಿದ ವಾರ್ಡ್ಗೆ ಮೂತ್ರ ಕೋಶದ ಸೋಂಕಿನ ಸಮಸ್ಯೆ ಇರೋ ಸಿದ್ದರಾಮಯ್ಯ ದಾಖಲಾಗಿದ್ದಾರೆ
ಇದರಿಂದಾಗಿ ರಾಜಕಾರಣದ ಒಳ ಅರಿತವರಿಗೆ ಇದರಲ್ಲೇನೋ ಇದೆ ಅನ್ನೋ ಅನುಮಾನಗಳನ್ನು ಮಣಿಪಾಲ್ ಆಸ್ಪತ್ರೆ ಸಾರಿ ಸಾರಿ ಹೇಳುತ್ತಿದೆ.
Laxmi News 24×7