ಗೋಕಾಕ: ಕಳೆದ ಕೆಲವು ದಿನಗಳಿಂದ ತನ್ನ ಆರ್ಭಟ ನಡೆಸಿದ್ದ ಕರೋನಾ ಮಹಾಮಾರಿಯು ಇಂದು ಸ್ವಲ್ಪ ತಗ್ಗಿದೆ. ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕುಸಿತ ಖಂಡಿದ್ದು, ತಾಲೂಕಿನಲ್ಲಿ ೨ ಸೋಂಕು ಮಾತ್ರ ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು.
{LAXMINEWS}ಯೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲಿ ಅಂಕಲಗಿ ಗ್ರಾಮದ ೧೪ ವರ್ಷದ ಯುವಕನಿಗೆ ಹಾಗೂ ಘಟಪ್ರಭಾದ ೨೫ ವರ್ಷದ ಯುವತಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಿಗೆ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಮನೆ ಸುತ್ತಮುತ್ತ ಪ್ರದೇಶಗಳನ್ನು ಸಿಲಡೌನ್ ಮಾಡಲಾಗಿದೆ ಎಂದು ಡಾ. ಜಿಂಗಿ ತಿಳಿಸಿದ್ದಾರೆ.
Laxmi News 24×7