ಕಾರವಾರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿ ಸೇರಿ ವಾಹನ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಿರೇಗುತ್ತಿ ಚೇಕ್ ಪೋಸ್ಟ್ ಬಳಿ ನಡೆದಿದೆ.
ಆರೋಪಿಗಳನ್ನು ಅಮೂಲ (36), ಜಮೀರ್ ಸಯ್ಯದ್(29) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಾಟವಾಗುತ್ತಿದ್ದ ಗೋಮಾಂಸವನ್ನು ರಾಷ್ಟ್ರೀಯ ಹೆದ್ದಾರಿ 66 ರ ಹಿರೆಗುತ್ತಿ ಚೆಕ್ ಪೋಸ್ಟ್ ನಲ್ಲಿ ಗೋಕರ್ಣ ಪಿಎಸ್ಐ ನವೀನ್ ಕುಮಾರ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ 3.50.ಲಕ್ಷ ಬೆಲೆಯ ಎರಡು ಟನ್ ಗೋಮಾಂಸ ದೊರೆತಿದೆ.ಆರೋಪಿಗಳನು ಬಂಧಿಸಲಾಗಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7