Breaking News

(ಸಿಇಟಿ-2020) ಅಬಾಧಿತವಾಗಿ ನಿಗದಿಯಂತೆ ನಡೆಯಲಿದೆ.

Spread the love

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2020) ಅಬಾಧಿತವಾಗಿ ನಿಗದಿಯಂತೆ ನಡೆಯಲಿದೆ. ಕೋವಿಡ್19 ಹರಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಿಇಟಿ ಪರೀಕ್ಷೆ ನಿಗದಿಪಡಿಸಿ 2020ರ ಮೇ 13 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ.

ಈ‌ ಕುರಿತು ಬಿ.ಆರ್. ಉಲ್ಲಾಸ್ ಮತ್ತು‌ ಅಬ್ಬುಲ್ಲಾ‌ ಖಾನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅಜಿರ್ಯನ್ನು ಬುಧವಾರ ಮೂರು ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ ನ್ಯಾಯಮೂತಿರ್ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಸಿಇಟಿ ಪರೀಕ್ಷೆ ಗೆ ತಡೆ ನೀಡಲು ನಿರಾಕರಿಸಿತು.

# ಹೈಕೋರ್ಟ್ ಹೇಳಿದ್ದೇನು?
ಪರೀಕ್ಷೆ ಗೆ ಹಾಜರಾಗಲಿರುವ ಎಲ್ಲ ವಿದ್ಯಾಥಿರ್ಗಳಿಗೂ ಎಸ್ಒಪಿ ಅನುಸಾರ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಒಂದೊಮ್ಮೆ ಕೋವಿಡ್&19 ಸೋಂಕು ಉಳ್ಳವರು ಮುಂಚಿತವಾಗಿ ಮಾಹಿತಿ ನೀಡಲು ವಿಲರಾಗಿದ್ದರೆ ಅಂಥವರಿಗೆ ಪರೀಕ್ಷೆ ಅವಕಾಶ ನಿರಾಕರಿಸಬಾರದು.

# ಸೋಂಕಿತ ಅಭ್ಯಥಿರ್ಗಳಷ್ಟೇ ಅಲ್ಲದೆ ಸೋಂಕು ರಹಿತ ಅಭ್ಯಥಿರ್ಗಳಿಗೂ ಅವರ ಮನವಿ ಮೇರೆಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

# ಕೋವಿಡ್&19 ತಡೆಗೆ ಆರೋಗ್ಯ ಸಚಿವಾಲಯ ರೂಪಿಸಿರುವ ಮಾರ್ಗಸೂಚಿಗಳು ಹಾಗೂ ಸಿಇಟಿ ಆಯೋಜನೆಗಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಎಸ್ಒಪಿ ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.

# ಕಂಟೇನ್ಮೆಂಟ್ ವಲಯಗಳಲ್ಲಿರುವ ವಿದ್ಯಾಥಿರ್ಗಳು ತಮ್ಮ ಪ್ರವೇಶಪತ್ರ ತೋರಿಸಿದರೆ ಆ ವಿದ್ಯಾಥಿರ್ಗಳಿಗೆ ಪಾಲಕರೊಂದಿಗೆ ಹೊರ ಬರಲು ಅವಕಾಶ ಕಲ್ಪಿಸಬೇಕು. ಈ ವಿಚಾರವಾಗಿ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ನಿರ್ದೇಶನ ನೀಡಬೇಕು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!

Spread the love ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!! ದೇಶದಲ್ಲಿನ ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ