Breaking News

ಪ್ರೇಯಸಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿತಿನ್……….

Spread the love

ಹೈದರಾಬಾದ್: ಟಾಲಿವುಡ್‍ನ ಖ್ಯಾತ ನಟ ನಿತಿನ್ ತಮ್ಮ ಗೆಳತಿ ಶಾಲಿನಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೈದರಾಬಾದ್‍ನ ತಾಜ್ ಫಲಕ್ನುಮಾ ಅರಮನೆಯಲ್ಲಿ ಭಾನುವಾರ ನಟ ನಿತಿನ್ ಮತ್ತು ಶಾಲಿಯ ಮದುವೆ ಸಮಾರಂಭ ನಡೆದಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ವಿಧಿಸಿರುವ ನಿಯಮಗಳನ್ನು ಅನುಸರಿಸಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿತಿನ್ ಮತ್ತು ಶಾಲಿನಿ ಮದುವೆಗೆ ಟಾಲಿವುಡ್ ಸ್ಟಾರ್ ನಟ-ನಟಿಯರು ಬಂದು ನವ ಜೋಡಿಗೆ ಶುಭಾ ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಿತಿನ್ ಮದುವೆ ಫೋಟೋವನ್ನು ಶೇರ್ ಮಾಡುವ ಮೂಲಕ ವಿವಾಹವಾಗಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಿತಿನ್ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಟನಿಗೆ ಮದುವೆಯ ಶುಭಾಶಯ ಕೋರುತ್ತಿದ್ದಾರೆ. ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಕೈಹಿಡಿದಿದ್ದಾರೆ. ಶಾಲಿನಿ ಎಂಬಿಎ ಪದವೀಧರೆಯಾಗಿದ್ದು, ಯುಕೆನಲ್ಲಿ ಅಧ್ಯಯನ ಮುಗಿಸಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದರು.

ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿಸಿ, ಹಿರಿಯರ ಸಮ್ಮತಿ ಪಡೆದು ಈ ಜೋಡಿ ಮದುವೆಯಾಗಿದ್ದಾರೆ. ನಟ ನಿತಿನ್ ಏಪ್ರಿಲ್ 16ರಂದು ದುಬೈನಲ್ಲಿ ತಮ್ಮ ಪ್ರೇಯಸಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದರು.ದುಬೈನ ಹೋಟೆಲ್‍ನಲ್ಲಿ ನಿತಿನ್ ಮದುವೆ ಕಾರ್ಯಕ್ರಮ ಮಾಡಲು ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದರಿಂದ ಹೈದರಾಬಾದ್‍ನಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆಯೇ ತಮ್ಮ ಪ್ರೇಯಸಿಯ ಜೊತೆ ನಿತಿನ್ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


Spread the love

About Laxminews 24x7

Check Also

ಮೇಶ್ ಜಾರಕಿಹೊಳಿ ವಿರುದ್ಧ ಸುಳ್ಳು ಸುದ್ದಿ: ₹20 ಕೋಟಿ ಮಾನನಷ್ಟ ಕೇಸ್‌

Spread the loveಬೆಳಗಾವಿ: ಅಸ್ತಿತ್ವದಲ್ಲಿ ಇಲ್ಲದ ಖಾಸಗಿ ಮಾಧ್ಯಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಅಪಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ