Breaking News

ನಾನು ಆರೋಗ್ಯವಾಗಿದ್ದು, ಯಾರೂ ಗಾಬರಿ ಆಗೋದು ಬೇಡ: ಕಾಮೇಗೌಡರು

Spread the love

ಮಂಡ್ಯ: ನಾನು ಆರೋಗ್ಯವಾಗಿದ್ದೇವೆ. ಹಾಗಾಗಿ ಯಾರೂ ಗಾಬರಿ ಆಗುವುದು ಬೇಡ ಎಂದು ಕಾಮೇಗೌಡರು ಕೈ ಮುಗಿದು ಮಾತನಾಡಿದ್ದಾರೆ.

ಕಾಮೇಗೌಡರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಐಸೋಲೇಷನ್ ವಾರ್ಡಿನಲ್ಲಿ ಆರೈಕೆ ಮಾಡುವವರು ಇಲ್ಲದ ಕಾರಣ ಅನ್ನ ನೀರು ಸೇವಿಸುವುದನ್ನು ತ್ಯಜಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಇದೀಗ ಸ್ವತಃ ಕಾಮೇಗೌಡರೇ, ಆಸ್ಪತ್ರೆಯಲ್ಲಿ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಮಂಡ್ಯದ ಕೋವಿಡ್ ಆಸ್ಪತ್ರೆಯ ಐಶೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಮಾತನಾಡಿರುವ ಕಾಮೇಗೌಡರು, ಆಸ್ಪತ್ರೆಯಲ್ಲಿ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆಗಾಗ ವೈದ್ಯರು ಬಂದು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಊಟ ತಿಂಡಿಯ ವ್ಯವಸ್ಥೆಯೂ ಚೆನ್ನಾಗಿದೆ. ನಾನು ಶೌಚಾಲಯಕ್ಕೆ ಹೋಗಿ ಬರಲು ಒಬ್ಬರನ್ನ ನಿಯೋಜಿಸುತ್ತೀನಿ ಎಂದು ಹೇಳಿರುವುದಾಗಿ ತಿಳಿಸಿದರು.

ನನಗೆ ಸ್ವಲ್ಪ ಕಾಲು ನೋವು ಇರುವುದು ಬಿಟ್ಟರೆ ಬೇರೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ನಾನು ಆರೋಗ್ಯವಾಗಿದ್ದೇವೆ. ಹೀಗಾಗಿ ಯಾರೂ ಗಾಬರಿಯಾಗೋದು ಬೇಡ. ಇತರ ರೋಗಿಗಳಿಗೂ ಇಲ್ಲಿ ಎಲ್ಲಾ ಸೌಕರ್ಯ ಇದೆ ಎಂದು ಕೈ ಮುಗಿದು ಕಾಮೇಗೌಡರು ಮಾತನಾಡಿದ್ದಾರೆ. 

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡು ಕೆರೆ ಕಟ್ಟೆಗಳು ನಿರ್ಮಿಸಿ ಪ್ರಖ್ಯಾತಿಯಾಗಿದ್ದಾರೆ. ಇತ್ತೀಚೆಗೆ ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಮಳವಳ್ಳಿ ಮತ್ತು ಮಂಡ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿದ್ದರಿಂದ ಕಾಮೇಗೌಡರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.


Spread the love

About Laxminews 24x7

Check Also

ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ.

Spread the love ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ. ಸಮಾಜದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ