Breaking News

ಅಲ್ಪ ಪ್ರಮಾಣದ ಲಕ್ಷ ಇದ್ದರೆ ಮನೆಯಲ್ಲೇ ಐಸೋಲೇಷನ್ ಮಾಡ್ಕೊಳ್ಳಿ- ಬಿಬಿಎಂಪಿ ಆಯುಕ್ತ ಮನವಿ

Spread the love

ಬೆಂಗಳೂರು: ಕೊರೊನಾ ವೈರಸ್‍ನ ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ದಯವಿಟ್ಟು ಮನೆಯಲ್ಲೇ ಐಸೋಲೇಷನ್ ಮಡಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅಯುಕ್ತರು, ಸಿಲಿಕಾನ್ ಸಿಟಿಯಲ್ಲಿ ಕೋವಿಡ್ -19 ನಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದು, ಸಂಕಷ್ಟ ತಪ್ಪಿಸಲು ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ತೀರಾ ಸಮಸ್ಯೆ ಇರುವವರಿಗೆ ಮಾತ್ರ ಬೆಡ್ ಸಿಗುತ್ತದೆ. ರೋಗ ಲಕ್ಷಗಳು, ಮೈಲ್ಡ್ ಸಿಂಪ್ಟಮ್ಸ್ ಇರುವವರು ಮನೆಯಲ್ಲೆ ಐಸೋಲೇಷನ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿ ಕೊರೊನಾ ಜಾಗೃತಿ ಅಭಿಯಾನದ ರಾಯಭಾರಿ ನಟ ರಮೇಶ್ ಅರವಿಂದ್ ಈ ಸಂಬಂಧ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಸಣ್ಣ, ಜ್ವರ, ಕಫ ಇರುವವರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಬೆಡ್ ನಲ್ಲಿ ಮಲಕ್ಕೊಂಡು ಬಿಡುತ್ತೀರಾ. ಇದು ಅಗತ್ಯವಿಲ್ಲ. ಯಾಕಂದ್ರೆ ಆ ಬೆಡ್‍ಗೆ ತುಂಬಾ ಜನ ಕಾಯುತ್ತಿದ್ದಾರೆ. ಬಹಳ ಅಗತ್ಯವಾಗಿ ಆ ಬೆಡ್ ಬೇಕೆ ಬೇಕು ಅನ್ನೋ ರೋಗಿಗಳು ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಅಲ್ಪ ಪ್ರಮಾದ ಲಕ್ಷಣ ಇರುವವರು ಆಸ್ಪತ್ರೆಗಳಿಗೆ ಬಂದು ಇಕ್ಕಟ್ಟಿಗೆ ಸಿಲುಕಿಸಬೇಡಿ. ಯಾರಿಗೆ ಅಗತ್ಯವಿದೆಯೋ ಅವರಿಗೆ ಆ ಬೆಡ್ ಸಲ್ಲಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹೋಂ ಐಸೋಲೇಷನ್:
* ಹೊಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯೋರಿಗೆ ಶುಗರ್, ಬಿಪಿ, ಹೃದಯ, ಕಿಡ್ನಿ ಸಮಸ್ಯೆ ಇರಬಾರದು.
* 50ವರ್ಷದೊಳಗಿನ ವಯಸ್ಸಿನವರು ಮಾತ್ರ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯಬಹುದು.
* ಸೋಂಕಿತ ವ್ಯಕ್ತಿಗೆ ಮನೆಯಲ್ಲಿ ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಬೇಕು.
* ಸೋಂಕಿತ ವ್ಯಕ್ತಿ ಬಳಸುವ ಶೌಚಾಲಯವನ್ನ ಇತರೆ ಕುಟುಂಬಸ್ಥರು ಬಳಸಬಾರದು.
* ಸೋಕಿಂತ ವ್ಯಕ್ತಿಯ ಕೊಠಡಿಗೆ ಭೇಟಿ ಕೊಡುವವರಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ.
* ಸೋಂಕಿತ ವ್ಯಕ್ತಿಯ ಕೊಠಡಿಯಲ್ಲಿ ಕೇರ್ ಟೇಕರ್ ಹೆಚ್ಚು ಸಮಯ ಇರುವಂತಿಲ್ಲ.
* ಕೊರೋನಾ ಪಾಸಿಟಿವ್ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆ?ಯಪ್ ಬಳಸಬೇಕು..
* ಸೋಕಿಂತನ ದೇಹದ ಉಷ್ಣತೆ ಮತ್ತು ಉಸಿರಾಟ ಬಗ್ಗೆ ಮಾನಿಟರ್ ಮಾಡಿ ದಾಖಲಿಸಬೇಕು.
* ಉಸಿರಾಟದ ಸಮಸ್ಯೆ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಕೂಡಲೇ ಡಾಕ್ಟರ್ ಸಲಹೆ ಪಡೆಯಬೇಕು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ