ಬೆಂಗಳೂರು, ಜು.24- ಪ್ರತಿ ವಾರ್ಡ್‍ಗಳಲ್ಲೂ ಕೊರೊನಾ ತನ್ನ ರೌದ್ರನರ್ತನವನ್ನು ಮುಂದುವರಿಸುತ್ತಿದೆ. ಕ್ಷಣ ಕ್ಷಣಕ್ಕೂ ಕೊರೊನಾ ಪ್ರಕರಣಗಳು ದುಪ್ಪಟ್ಟಾಗುತ್ತಿವೆ.
ನಮ್ಮ ವಾರ್ಡ್‍ಗಳಲ್ಲಿ ಹೆಚ್ಚೇನೂ ಕೊರೊನಾ ಕೇಸ್‍ಗಳಿಲ್ಲ ಎಂದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಗಳೂರಿನ 198 ವಾರ್ಡ್‍ಗಳ ಪೈಕಿ 197 ವಾರ್ಡ್‍ಗಳಲ್ಲಿ ಕೊರೊನಾ ತನ್ನ ಕಬಂಧಬಾಹುವನ್ನು ಚಾಚಿದೆ.
197 ವಾರ್ಡ್‍ಗಳು ಕೂಡ ಡೇಂಜರ್ ಝೋನ್‍ನಲ್ಲಿವೆ. ಬೆಂಗಳೂರಿನ 41 ವಾರ್ಡ್‍ಗಳಲ್ಲಿ 100ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಇವೆ. 33 ವಾರ್ಡ್‍ಗಳಲ್ಲಿ 80 ರಿಂದ 100 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.

46 ವಾರ್ಡ್‍ಗಳಲ್ಲಿ 60 ರಿಂದ 80 ಸೋಂಕಿತರಿದ್ದಾರೆ. 57 ವಾರ್ಡ್‍ಗಳಲ್ಲಿ 40 ರಿಂದ 50 ಜನ ಸೋಂಕಿತರಿದ್ದಾರೆ. ಉಳಿದಂತೆ 20 ವಾರ್ಡ್‍ಗಳಲ್ಲಿ 30 ರಿಂದ 40 ಸೋಂಕಿತರಿದ್ದಾರೆ. ಯಾವ ವಾರ್ಡ್‍ಗಳ ಯಾವ ಗಲ್ಲಿಗಳಿಗೆ ಹೋದರೂ ರೆಡ್ ಅಲರ್ಟ್ ಬೋರ್ಡ್‍ಗಳು ರಾರಾಜಿಸುತ್ತಿವೆ.
ಮೊದಲಿನಂತೆ ನಗರದಲ್ಲಿ ಸಲೀಸಾಗಿ ಓಡಾಡಲು ಸಾಧ್ಯವಿಲ್ಲ. ನಮ್ಮ ವಾರ್ಡ್‍ನಲ್ಲಿ, ನಮ್ಮ ಏರಿಯಾದಲ್ಲಿ, ನಮ್ಮ ಗಲ್ಲಿಯಲ್ಲಿ ಸೋಂಕಿತರಿಲ್ಲ ಎಂದು ನಾವು ಮೈ ಮರೆತರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.
ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಸ್ವಯಂ ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಇಂದಲ್ಲ ನಾಳೆ ನಾವೂ ಕೊರೊನಾ ಸೋಂಕಿತರಾಗುವುದರಲ್ಲಿ, ಕೊರೊನಾಗೆ ಬಲಿಯಾಗುವುದರಲ್ಲಿ ಅನುಮಾನವಿಲ್ಲ.
Laxmi News 24×7