ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮರಣ ನರ್ತನಕ್ಕೆ ಗುರುವಾರ 70 ಮಂದಿ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾಗೆ ಸಾವನ್ನಪ್ಪಿದ್ದವರ ಸಂಖ್ಯೆ 507ಕ್ಕೆ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಕೊರೊನಾಗೆ ದಿನೇ ದಿನೇ ಅಧಿಕ ಜನರು ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಿಕೊಳ್ಳಲು ವಿಳಂಬವಾಗುತ್ತಿರುವುದರಿಂದ ಕೆಲವರು ಸಾಯುತ್ತಿದ್ದಾರೆ. ಇನ್ನೂ ಕೆಲವರು ಈಗಾಗಲೇ ಕಿಡ್ನಿ ಸಮಸ್ಯೆ, ಹೈಪರ್ ಟೆನ್ಶನ್, ಶುಗರ್, ಕ್ಯಾನ್ಸರ್‍ನಂತಹ ಕಾಯಿಲೆ ಬಳಲುತ್ತಿರುತ್ತಾರೆ. ಅಂತವಹರಿಗೆ ಕೊರೊನಾ ತಗುಲಿದ್ದು, ಬೇರೆ ಕಾಯಿಲೆ ಉಲ್ಬಣಗೊಂಡು ಮೃತಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾದ ಅತಿಯಾದ ಭಯಕ್ಕೆ ಸೋಂಕಿತರು ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಹೀಗಾಗಿ ವೈದ್ಯರು, ತಜ್ಞ ವೈದ್ಯರು ಕೊರೊನಾದಿಂದ ರಕ್ಷಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಬೆಂಗಳೂರನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವನ್ನು ಕೂಡ ತಿಳಿಸಿದ್ದಾರೆ.
ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡೋ ವೈದ್ಯರು ಹೇಳೋದೇನು?
1. ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗೋದು ವಿಳಂಬವಾಗುತ್ತಿದೆ. ಅಷ್ಟರಲ್ಲಿ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿರುತ್ತೆ.
2. ಈಗ ಸಾವನ್ನಪ್ಪಿದ ಶೇ.70 ರಷ್ಟು ಮಂದಿಗೆ ಬೇರೆ ಬೇರೆ ದೀರ್ಘಕಾಲಿಕ ಅನಾರೋಗ್ಯ ಇದೆ. ಕಿಡ್ನಿ ಸಮಸ್ಯೆ ಹೈಪರ್ ಟೆನ್ಶನ್ ಶುಗರ್ ಕ್ಯಾನ್ಸರ್ ನಂತಹ ಕಾಯಿಲೆ ಇದ್ದವು.
3. ಸೋಂಕಿತರಿಗೆ ಬೇರೆ ಕಾಯಿಲೆ ಇದ್ದಾಗ ಅದು ಉಲ್ಬಣಗೊಂಡು ಸಾವನ್ನಪ್ಪುತ್ತಿದ್ದಾರೆ.
4. ಅತಿಯಾದ ಭಯಕ್ಕೆ ಹೃದಯಾಘಾತವಾಗುತ್ತಿದೆ.
ತಜ್ಞರ ರಿಪೋರ್ಟ್ ಏನು?
1. ಪರೀಕ್ಷಾ ವರದಿ ವಿಳಂಬ- ಪರೀಕ್ಷಾ ವರದಿ ಕೈಸೇರುವಷ್ಟರಲ್ಲಿ ಸೋಂಕಿತನ ಆರೋಗ್ಯ ಸಂಪೂರ್ಣ ಹದಗೆಟ್ಟಿರುತ್ತೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವು.
2. ಬೆಡ್ ಸಿಗುತ್ತಿಲ್ಲ- ಸಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆಯಾಗುತ್ತಿದೆ. ಹೈ- ಪ್ಲೂ ಆಕ್ಸಿಜನ್ ಬೆಡ್ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ಕಡೆ ಖಾಲಿಬಿದ್ದಿದರೂ ರೋಗಿಗಳಿಗೆ ಸಂವಹನವಾಗುತ್ತಿಲ್ಲ. ಇದರಿಂದ ಸಾವು
3 ಐಸಿಯು ವೆಂಟಿಲೇಟರ್ ತೀರಾ ಕೊರತೆ ಇದೆ. ಇದರಿಂದ ಸಾವನ್ನಪ್ಪುತ್ತಿದ್ದಾರೆ.
4. ಶುಚಿತ್ವದ ಕೊರತೆ- ಗಾಳಿ ಬೆಳಕು ಸ್ವಚ್ಛವಾಗಿ ಬರುತ್ತಿಲ್ಲ. ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಸಾವು.
5. ಉಸಿರಾಟದ ತೊಂದರೆ ಇರುವ ರೋಗಿಗಳ ಸರ್ವೆಯನ್ನು ತಕ್ಷಣ ಮಾಡಬೇಕಿತ್ತು. ಅವರಿಗೆ ಟೆಸ್ಟ್ ಮಾಡಬೇಕಿತ್ತು. ಹೈರಿಸ್ಕ್ ಇರೋರಿಗೆ ಮೊದಲು ಟೆಸ್ಟ್ ಮಾಡಿಸಿದರೆ ಅನೇಕರ ಪ್ರಾಣ ಉಳಿಯಬಹುದಾಗಿತ್ತು. ಏಳು ಲಕ್ಷ ಜನ ಬೆಂಗಳೂರಿನಲ್ಲಿ ಹೈರಿಸ್ಕ್ ನಲ್ಲಿರುವವರು ಇದ್ದಾರೆ
6. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ನಿರಾಕರಣೆ- ಸೂಕ್ತ ಸಮಯಕ್ಕೆ ಬಾರದ ಅಂಬುಲೆನ್ಸ್‍ನಿಂದ ಸಾವು ಹೆಚ್ಚಳ.
ಬೆಂಗಳೂರು ಜನ ಮಾಡಬೇಕಾಗಿರೋದು ಏನು?
1. ರೋಗ ನಿರೋಧಕ ಶಕ್ತಿ ಇರುವವರಲ್ಲಿ ರೋಗ ಲಕ್ಷಣಗಳೂ ಕಾಣಿಸುವುದು ಕಡಿಮೆ. ಆದರೆ ಅನಾರೋಗ್ಯ ಹೊಂದಿರುವವರೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸೋಂಕಿನ ಅಪಾಯದಲ್ಲಿರುವವರನ್ನು ಅಂದರೆ ಕಿಡ್ನಿ ಸಮಸ್ಯೆ ಶುಗರ್, ಹೃದ್ರೋಗ ಸಮಸ್ಯೆ, ಹೈಪರ್ ಟೆನ್ಶನ್ ಸಮಸ್ಯೆ ಇರೋರನ್ನು ಹೋಂ ಐಸೋಲೇಷನ್ ಮಾಡಿ ಸೋಂಕು ತಗುಲದಂತೆ ಮಾಡಬೇಕು. ಈ ಕಾಯಿಲೆ ಇದ್ದವರು ಈ ಸಮಯದಲ್ಲಿ ಸಾಧ್ಯವಾದಷ್ಡು ಹೊರಗಡೆ ಹೋಗದೆ ಮನೆಯಲ್ಲಿಯೇ ಕ್ವಾರಂಟೈನ್ ಆದರೆ ಉತ್ತಮ.
2 ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ. ಹೊರಗಡೆ ಅಡ್ಡಾಡದಂತೆ ಎಚ್ಚರ ವಹಿಸಿ.
3. ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಸಾಧ್ಯವಾದಷ್ಟು ಮನೆಯೊಳಗೆ ಇರಲು ಪ್ರಯತ್ನಿಸಿ.