ಬೆಂಗಳೂರು: ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದರೇ ಅವರಿಗೆ 5 ಸಾವಿರ ರೂ. ಭತ್ಯೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಗುಣಮುಖರಾದವರು 14-28 ದಿನಗಳ ಒಳಗೆ ಒಬ್ಬ ವ್ಯಕ್ತಿ ಒಂದು ಬಾರಿಯಷ್ಟೇ ದಾನ ಮಾಡಲು ಅವಕಾಶವಿದೆ. ಈಗಾಗಲೇ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭಿಸಲಾಗಿದ್ದು, ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನವಾಗಿ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಮಹಾಮಾರಿ ಇನ್ನಷ್ಟು ವ್ಯಾಪಿಸೋ ಬಗ್ಗೆ ಎಚ್ಚರಿಕೆ ಬೆನ್ನಲ್ಲೇ ಸರ್ಕಾರ ಹೊಸ ಹೊಸ ಕ್ರಮಕ್ಕೆ ಮುಂದಾಗಿದೆ. ವಾರದ ಲಾಕ್‍ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಪಣತೊಟ್ಟಂತಿದೆ. ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರೋ ಬೆನ್ನಲ್ಲೇ ತ್ವರಿತವಾಗಿ ರಿಪೋರ್ಟ್ ನೀಡಲು ಸರ್ಕಾರ ಆದೇಶಿಸಿದೆ. ಇನ್ನೆರಡು ತಿಂಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 100ರಷ್ಟು ಹೆಚ್ಚಾಗೋ ಸಾಧ್ಯತೆ ಇದೆ. ಮೊನ್ನೆಯ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಕ್ಲಾಸ್ ತೆಗೆದುಕೊಂಡ ಬೆನ್ನಲ್ಲೇ ಸಚಿವರು, ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಮುಂಬೈನ ಧಾರಾವಿ ಸ್ಲಂನಲ್ಲಿ ಸೋಂಕು ನಿಯಂತ್ರಣಕ್ಕೆ ಬಳಸಿದ ಕ್ರಮಗಳನ್ನು ಅನುಸರಿಸಲು ತೀರ್ಮಾನಿಸಿದ್ದಾರೆ.
ಬೂತ್ ಮಟ್ಟದ ಕಾರ್ಯಪಡೆ ರಚನೆ ಮಾಡಿ. ಅವರಿಗೆ ತರಬೇತಿ ನೀಡಿ, ಮನೆ ಮನೆ ಸಮೀಕ್ಷೆ ನಡೆಸಲು ಪ್ಲಾನ್ ಮಾಡಿದ್ದಾರೆ. ಲಾಕ್‍ಡೌನ್ ಅವಧಿ ಮುಕ್ತಾಯಗೊಳ್ಳುವ ಮುನ್ನನೇ ಬೂತ್ ಮಟ್ಟದ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಕೈಗೊಂಡಿರಬೇಕು ಎಂದು ವೈದ್ಯಶಿಕ್ಷಣ ಮಂತ್ರಿಗಳು, 8 ವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಮೀಕ್ಷೆಗಾಗಿ ಬೂತ್ ಮಟ್ಟದ ಸಮಿತಿಗಳಿಗೆ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದೆ. ಹಿರಿಯ ಅಧಿಕಾರಿ ಶಾಲಿನಿ ರಜನೀಶ್‍ಗೆ ಸಮನ್ವಯದ ಉಸ್ತುವಾರಿ ವಹಿಸಲಾಗಿದೆ ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.