ತೋಳ ಗ್ರಾಮದ ನುಗ್ಗಿ ಸುಮಾರು 14 ಜನರಿಗೆ ಕಚ್ಚಿ ಗಂಭೀರ ಗಾಯ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ಚಿಲಕರಾಗಿ ಮತ್ತು ಇರಕಲ್ ಗ್ರಾಮಗಳು.
ಅಡವಿಯಲ್ಲಿ ಇರಬೇಕಾದ ತೋಳ ಗ್ರಾಮಕ್ಕೆ ನುಗ್ಗಿ ಸುಮಾರು14 ಜನರಿಗೆ ಕಚ್ಚಿದ್ದು ಲಿಂಗಸೂಗೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಸ್ಕಿ ತಾಲೂಕಿನ ಪಾಮನಕಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಲಕರಾಗಿ ಹಾಗೂ ಇರಕಲ್ ಗ್ರಾಮದ ಒಟ್ಟು 14 ಜನರಿಗೆ ತೋಳ ಕಚ್ಚಿದ್ದು, ಬೆಳಗಿನ ಜಾವ 4 ಗಂಟೆಗೆ ಇದ್ದಕ್ಕಿದ್ದಂತೆ ಗ್ರಾಮದೊಳಕ್ಕೆ ನುಗ್ಗಿದ ತೋಳ ಮನಸೋ ಇಚ್ಚೆ ಕಚ್ಚಿದ್ದು ಎದುರಿಗೆ ಕಂಡ ಜನರಿಗೆಲ್ಲ ಮನಸೋ ಇಚ್ಚೆ ಕಚ್ಚುತ್ತಿದ್ದೆ ಗ್ರಾಮದ ಜನರು ಭಯಭೀತರಾಗಿದ್ದಾರೆ
ಚಿಲಕರಾಗಿ ಗ್ರಾಮದ ವೀರಭದ್ರಪ್ಪ ಕುಂಬಾರ,ಹುಲಗಪ್ಪ,ಶಾಂತಮ್ಮ,ಪಾರ್ವತೆಮ್ಮ,ಈರಮ್ಮ,ದುರಗಮ್ಮ,ಪಾರ್ವತಿ, ಆದಪ್ಪ,ಹಾಗು ಇರಕಲ್ ಗ್ರಾಮದ ನಿರುಪಾದಿ,ಶಿವಮ್ಮ ಸೇರಿದಂತೆ ಇತರರು ಗಂಭೀರವಾಗಿ ಗಾಯಗೊಂಡಿದ್ದು,ಗಾಯಾಳುಗಳನ್ನು ಲಿಂಗಸಗೂರ ತಾಲೂಕ ಆಸ್ಪತ್ರೆಗೆ ಸೇರಿಸಲಾಯಿತು.
ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಲಿಂಗಸೂಗೂರು ಮುಖ್ಯ ವೈಧ್ಯಾಧಿಕಾರಿ ಡಾ.ಲಕ್ಷ್ಮಪ್ಪ ತಿಳಿಸಿದ್ದಾರೆ.