ಬಾಗಲಕೋಟೆ : ಬಿ.ವಿ.ವಿ. ಸಂಘದ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಪಕ ಮತ್ತು ನಾಡಿನ ಹಿಂದೂಸ್ತಾನಿ ಸಂಗೀತಗಾರರಾದ ಡಾ. ಪಂಡಿತ ಸಿದ್ದರಾಮಯ್ಯ ಮಠಪತಿ ( ರುದ್ರಮಠ ) ಗೊರಟಾ ಅವರಿಗೆ ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೊಡದ ಹಿರೇಮಠ ಚೆನ್ನಬಸವೇಶ್ವರ ಸಂಸ್ಥಾನವು ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ನೀಡಿದೆ .
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದನ್ನು ಒಳಗೊಂಡಿದ್ದೆ. ಡಾ. ಪಂಡಿತ ಸಿದ್ದರಾಮಯ್ಯ ಮಠಪತಿ ಅವರು ಕಳೆದ ಮೂವತ್ತು ವರ್ಷಗಳಿಂದ ಸಂಗೀತದ ಸೇವೆಯಲ್ಲಿ ತಮ್ಮನ್ನು ತೋಡಗಿಸಿಕೊಂಡು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಜ.31ರಂದು ಹಾರಕೊಡದಲ್ಲಿ ನಡೆಯುವ ಕಲ್ಯಾಣ ಕರ್ನಾಟಕದ 10ನೇ ಸಂಗೀತ ದಿನಾಚಾರಣೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವರು. ಪ್ರಶಸ್ತಿ ಪುರಸ್ಕೃತರಿಗೆ ಸಂಗೀತಗಾರರು, ಶಿಷ್ಯರು ಅಭಿನಂದಿಸಿದ್ದಾರೆ
Laxmi News 24×7