Breaking News

ಮನರೇಗ ಮರು ಜಾರಿಯಾಗುವವರೆಗೂ ಹೋರಾಟ ನಿಲ್ಲದು ಮಹಾತ್ಮ ಗಾಂಧಿಯವರ ಹೆಸರು ಬದಲಿಸಲು ನಾವು ಬಿಡುವುದಿಲ್ಲಾ:- ಆಹಾರ ಸಚಿವ ಕೆಹೆಚ್. ಮುನಿಯಪ್ಪ

Spread the love

ಬೆಂಗಳೂರು:ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು, ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ “ನರೇಗಾ ಬಚಾವ್ ಸಂಗ್ರಾಮ್ ಮತ್ತು‌ ಲೋಕಭವನ್ ಚಲೋ” ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ.

ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ಇವತ್ತು ಮನ್ರೇಗ ಯೋಜನೆ ತೆಗೆದು ಹಾಕುವಂತಹ ಕೆಲಸವನ್ನು ಮಾಡಿದೆ.

ಅದಕ್ಕಿಂತಲೂ ಮುಖ್ಯವಾಗಿ, ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಹಾಕುವಂತಹ ಕೆಲಸವನ್ನು ಮಾಡಿದೆ ಇದು ಬಹಳ ದೊಡ್ಡ ವಿಷಯ ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಬೇಕು.

ಯಾವ ರೀತಿ ಪಂಜಾಬಿನಲ್ಲಿ ರೈತರು ನಿರಂತರವಾಗಿ ಹೋರಾಟ ಮಾಡಿದರು, ಅದೇ ರೀತಿಯಾಗಿ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ರಾಷ್ಟ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ಸೇರಿ ಹೋರಾಟ ನಡೆಸಬೇಕು. ನಾವು ದೆಹಲಿಯಲ್ಲಿ ಸತ್ಯಾಗ್ರಹ ಮಾಡಬೇಕು, ದೆಹಲಿಯಲ್ಲಿ ಹೋರಾಟ ಮಾಡಬೇಕು.

ಫೆಬ್ರವರಿಯ ಒಂದನೇ ತಾರೀಖಿನಿಂದ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಇಡೀ ರಾಷ್ಟ್ರದ ನಾಯಕರು ಅಲ್ಲಿ ಸೇರಿ ಹೋರಾಟ ಹಾಗೂ ಸತ್ಯಾಗ್ರಹ ನಡೆಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಮತ್ತೆ ವಾಪಸ್ ತರುವಂತಹ ಕೆಲಸವನ್ನು ಮಾಡಬೇಕು.

ಅದಕ್ಕಾಗಿ ನಾವೆಲ್ಲರೂ ಸಂಪೂರ್ಣವಾಗಿ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಇದು ಇಲ್ಲಿಗೆ ನಿಲ್ಲಿಸುವ ಹೋರಾಟವಲ್ಲ ಕೇವಲ ರಾಜ್ಯಪಾಲರಿಗೆ ಪಾದಯಾತ್ರೆಯ ಮೂಲಕ ಮನವಿ ಸಲ್ಲಿಸುವುದರಿಂದ ಸಾಕಾಗುವುದಿಲ್ಲ. ಇದು ರಾಷ್ಟ್ರವ್ಯಾಪ್ತಿ ಚಳುವಳಿಯಾಗಬೇಕು.

ಸಂಸತ್ ಅಧಿವೇಶನ ನಡೆಯುವ ಸಂಪೂರ್ಣ ಅವಧಿಯಲ್ಲೂ ನಾವು ದೆಹಲಿಯಲ್ಲಿ ಹೋರಾಟ ಮತ್ತು ಸತ್ಯಾಗ್ರಹ ನಡೆಸಬೇಕು. ಮಹಾತ್ಮ ಗಾಂಧಿಯ ಹೆಸರನ್ನು ಹಾಗೂ ಕಾನೂನು ಜಾರಿಗೆ ಬರುವ ತನಕ ಈ ಹೋರಾಟ ನಿರಂತರವಾಗಿ ನಡೆಯಬೇಕು.

ಮಹಾತ್ಮ ಗಾಂಧಿಯವರ ಹೆಸರನ್ನು ನಾವು ಮತ್ತೆ ಉಳಿಸಿಕೊಳ್ಳಲೇಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಚಿವರಾದ ಮಹದೇವಪ್ಪ,ಹೆಚ್.ಕೆ ಪಾಟೀಲ್,ದಿನೇಶ್ ಗುಂಡೂರಾವ್ ಬಿಕೆ ಹರಿಪ್ರಸಾದ್, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್,ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ: ಗೋವಿಂದ ಕಾರಜೋಳ

Spread the loveಚಿತ್ರದುರ್ಗ: ಸಿದ್ದರಾಮಯ್ಯ  ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ ಎಂದು ಸಂಸದ ಗೋವಿಂದ ಕಾರಜೋಳ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ