Breaking News

ಅಪರಾದ ತಗ್ಗಿಸಲು ಶ್ವಾನಗಳಿಗೆ ಹೆಚ್ಚಿನ ತರಬೇತಿ ಅವಶ್ಯ: ಸಚಿವ ಸತೀಶ ಜಾರಕಿಹೊಳಿ

Spread the love

ಬೆಳಗಾವಿ: ನಿಷ್ಕಲ್ಮಶ, ಪ್ರೀತಿ, ನಿಷ್ಠೆಗೆ ಶ್ವಾನಗಳಿಗೆ ಶ್ವಾನಗಳೇ ಸರಿಸಾಟಿ, ಶ್ವಾನವನ್ನು ಪ್ರೀತಿಯಿಂದ ಬೆಳೆಸಿದಾಗ ಮಾತ್ರ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತವೆ. ಅವುಗಳನ್ನು ಸ್ನೇಹಮಯವಾಗಿ ಬೆಳೆಸಬೇಕು ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ನಗರದ ಸರ್ದಾರ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಯೋಜಿಸಲಾದ ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.‌

ಪ್ರಾಣಿ ಹಿಂಸೆ ವಿರುದ್ಧ ಜಾಗೃತಿ, ಶ್ವಾನಗಳ ಆರೈಕೆ, ಆಹಾರ, ಲಸಿಕೆ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ. ಶ್ವಾನಗಳಿಗೆ ಯಾವ ರೀತಿ ತರಬೇತಿ ನೀಡುತ್ತೆವೆ ಹಾಗೇ ಬೆಳೆದು ನಮ್ಮನ್ನು ಕಾಪಾಡುತ್ತದೆ. ವಿದೇಶಗಳಲ್ಲಿ ಶ್ವಾನಗಳಿಗೆ ವಿಶೇಷ ಸ್ಥಾನವಿದೆ. ಆ, ಪದ್ದತಿ ನಮ್ಮಲ್ಲಿ ರೂಡಿಯಾಗಬೇಕಿದೆ. ಶ್ವಾನಗಳ ಬಗ್ಗೆ ಹೆಚ್ಚಿನ ಜಾಗೃತ ಕಾರ್ಯಗಳು ನಡೆಯಲಿ, ಶ್ವಾನಗಳ ಹಾವಳಿಯಿಂದ ಇನ್ನಿತರ ಸಮಸ್ಯೆಗಳು ಆಗುತ್ತವೆ. ಹೀಗಾಗಿ ನಾವು ಅವುಗಳನ್ನು ಪ್ರೀತಿಯಿಂದ ಕಾಣುವುದರಜೊತೆಗೆ ನಮ್ಮಂತೆ ಬದುಕಲು ನಾವೆಲ್ಲರೂ ಅವಕಾಶ ಮಾಡಿಕೊಡಬೇಕು.

10 ವರ್ಷಗಳ ಬಳಿಕ, ಶ್ವಾನ ಪ್ರದರ್ಶನ ಬೆಳಗಾವಿಯಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷವೂ ಶ್ವಾನ ಪ್ರದರ್ಶನ ನಡೆಯಲಿ. ಪೊಲೀಸ್ ಇಲಾಖೆಯೂ ಹೆಚ್ಚಿನ ಶ್ವಾನಗಳಿಗೆ ತರಬೇತಿ ನೀಡಲಿದಾಗ ಅಪರಾದ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಗುತ್ತೆ. ನಗರ ಶ್ವಾನ ದಳದ ಸಾಮರ್ಥ್ಯ ಮತ್ತೆ ವೃದ್ಧ್ದಿಯಾಗಲಿ ಎಂದರು.

ಶಾಸಕ ರಾಜು ಶೇಠ ಮಾತನಾಡಿ, ಶ್ವಾನಗಳು ಜನರ ಸ್ನೇಹಿಯಾಗಿದೆ. ನಗರದಲ್ಲಿ ಅಪರಾದ ಕಡಿಮೆಯಾಗಲು ಶ್ವಾನಗಳ ಅವಶ್ಯವಿದೆ. ಸಾಕಿರುವ ಶ್ವಾನಗಳು ನಿಷ್ಠೆಯಿಂದ ಕೆಲಸಮಾಡುತ್ತವೆ. ಹೀಗಾಗಿ ಅವುಗಳ ಜಾಗೃತ, ಸಾಕಾಣಿಕೆ ಹೆಚ್ಚಿಸಬೇಕು ಎಂದರು.

ಶ್ವಾನ ಪ್ರದರ್ಶನ ವೀಕ್ಷಿಸಿದ ಸಚಿವರು: ಈ ‘ಡೊಂಕು ಬಾಲದ ನಾಯಕ’ರನ್ನು ನೋಡಲು ಪ್ರಾಣಿಪ್ರಿಯರು ಕಿಕ್ಕಿರಿದು ಸೇರಿದ್ದರು. ಇಡೀ ಮೈದಾನ ಶ್ವಾನ ಪ್ರಿಯರಿಂದ ತುಂಬಿತ್ತು.ವಿವಿಧ ತಳಿಗಳ ಶ್ವಾನಗಳು ತಮ್ಮ ಚೇಷ್ಟೆಗಳು, ನಡಿಗೆ ಮತ್ತು ಆಕರ್ಷಕ ನೋಟದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದವು. ನಾಯಿಗಳ ಕೌಶಲ್ಯ, ವಿಧೇಯತೆ ಮತ್ತು ವಾತ್ಸಲ್ಯವನ್ನು ತೋರಿಸುವ ಪ್ರದರ್ಶನಗಳು ಗಮನ ಸೆಳೆದವು. ವಿಶೇಷವಾಗಿ ಸಚಿವರು ಈ ವೈವಿಧ್ಯಮಯ ಸಾಕುಪ್ರಾಣಿಗಳನ್ನು ನೋಡಿ ಸಂತೋಷಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿ ಮೋಹಮ್ಮದ್‌ ರೋಷನ್‌ , ಜಿಲ್ಲಾ ಪಂಚಾಯತ ಸಿಇಓ ರಾಹುಲ್‌ ಸಿಂಧೆ, ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ ಗುಲಾಬರಾವ್, ಎಸ್ಪಿ ಕೆ.‌ ರಾಮರಾಜನ್ , ಬುಡಾ ಮಾಜಿ ಅಧ್ಯಕ್ಷರಾದ ಲಕ್ಷ್ಮಣರಾವ್‌ ಚಿಂಗಳೆ, ಸುನೀಲ್‌ ಹನ್ನಮಣನವರ್‌, ವಿನಯ ನಾವಲಗಟ್ಟಿ ಬೆಳಗಾವಿ ಪಶುಪಾಲನಾ ಇಲಾಖೆಯ ಡಿಡಿ ಆನಂದ್‌ ಪಾಟೀಲ್‌ ಪಶು ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.


Spread the love

About Laxminews 24x7

Check Also

ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ

Spread the loveಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ  ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ