ಬೆಂಗಳೂರು: ಚೀನಾ ವೈರಸ್ ರಾಜ್ಯದಲ್ಲಿ ರಣರಣಿಸುತ್ತಿದೆ. ದಿನದಿನವೂ ಉಗ್ರರೂಪ ತಾಳಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ರಾಜ್ಯದಲ್ಲಿ ಶುಕ್ರವಾರ ದಾಖಲೆಯ 2300ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬೆಂಗಳೂರಲ್ಲಂತೂ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಕೇವಲ ರಾಜಧಾನಿಯೊಂದರಲ್ಲೇ 1400ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ.
ರಾಜ್ಯದಲ್ಲಿ ಎರಡನೇ ಬಾರಿಗೆ ದಿನದಲ್ಲಿ 50ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದರಲ್ಲಿ ಬೆಂಗಳೂರಿನಲ್ಲೇ 29 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ 8 ಮಂದಿ, ಮೈಸೂರಲ್ಲಿ ನಾಲ್ವರು, ಬೀದರ್‍ನಲ್ಲಿ ಮೂವರು, ಕಲಬುರಗಿ, ಮೈಸೂರು, ಚಿಕ್ಕಬಳ್ಳಾಪುರ, ಗದಗದಲ್ಲಿ ತಲಾ ಇಬ್ಬರು, ಬಳ್ಳಾರಿ, ರಾಯಚೂರು, ಉತ್ತರ ಕನ್ನಡ, ಹಾವೇರಿಯಲ್ಲಿ ತಲಾ ಒಬ್ಬರು ಬಲಿ ಆಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 500 ದಾಟಿದೆ. ಇನ್ನೂ ಚೇತರಿಕೆ ಪ್ರಮಾಣದಲ್ಲಿಯೂ ಇವತ್ತು ದಾಖಲೆ ಸೃಷ್ಟಿಯಾಗಿದೆ.
25ಕ್ಕೂ ಹೆಚ್ಚು ವಾರಿಯರ್ಸ್‌ಗೆ ಸೋಂಕು ದೃಢ
ಬೆಂಗಳೂರಿನ ಕೆಸಿ ಜನರಲ್‍ನಲ್ಲಿ ಕೊರೊನಾ ಬ್ಲಾಸ್ಟ್ ಆಗಿದೆ. ಕೊರೊನಾ ವಾರಿಯರ್ಸ್‌ಗೆ ಹೆಮ್ಮಾರಿ ಡೆಡ್ಲಿ ಅಟ್ಯಾಕ್ ಮಾಡಿದೆ. ಆಸ್ಪತ್ರೆಯ 20 ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೂರು ಜನ ಡಾಕ್ಟರ್, 13 ಮಂದಿ ನರ್ಸ್, ಒಬ್ಬ ಲ್ಯಾಬ್ ಟೆಕ್ನಿಶಿಯನ್, ಮೂವರು ವಾರ್ಡ್ ಬಾಯ್ಸ್, ಒಬ್ಬ ಕಂಪ್ಯೂಟರ್ ಆಪರೇಟರ್‌ಗೆ ಸೋಂಕು ವಕ್ಕರಿಸಿದೆ. ಮತ್ತಷ್ಟು ಮಂದಿಗೆ ಸೋಂಕು ತಗುಲಿರುವ ಆತಂಕ ಕೂಡ ಇದೆ.
ಪೊಲೀಸರನ್ನ ಬಿಟ್ಟು ಬಿಡದೇ ಕಾಡ್ತಿದೆ ಕಿಲ್ಲರ್
ಒಂದೇ ದಿನ 26 ಜನ ಪೊಲೀಸರಿಗೆ ಪಾಸಿಟಿವ್ ಕಂಡು ಬಂದಿದ್ದು, ಸೋಂಕಿತ ಪೊಲೀಸರ ಸಂಖೆ 470ಕ್ಕೆ ಏರಿದೆ. ಪೊಲೀಸ್ ಕಮಿಷನರ್ ಕಚೇರಿಯ 12 ಮಂದಿ ಸಿಬ್ಬಂದಿಗೆ ಸೋಂಕು ತಗುಲಿದ್ದು, ಮತ್ತೊಮ್ಮೆ ಪೊಲೀಸ್ ಕಮಿಷನರ್ ಕಚೇರಿ ಸೀಲ್‍ಡೌನ್ ಆಗಿದೆ. ವಿಧಾನಸೌಧ ಪೊಲೀಸ್ ಠಾಣೆ ಕೂಡ ಸೀಲ್ ಆಗಿದೆ.
ಕೊರೊನಾ ಸುಳಿಯಲ್ಲಿ ನಲುಗುತ್ತಿರುವ ಕರುನಾಡಿಗೆ ಬಿಗ್ ರಿಲೀಫ್ ಸಿಗುತ್ತಿದೆ. ಫಟಾಫಟ್ ಟೆಸ್ಟ್, ಫಟಾಫಟ್ ರಿಸಲ್ಟ್ ಕೊಡುವ ಆಂಟಿಜೆನ್ ಟೆಸ್ಟ್ ಕಿಟ್ ಬೆಂಗಳೂರಿಗೆ ಬಂದಿದೆ. 1 ಲಕ್ಷ ಟೆಸ್ಟ್ ಕಿಟ್‍ಗಳು ಈಗಾಗಲೇ ರೆಡಿಯಿದ್ದು, ಸೋಮವಾರದಿಂದ ಇದರಿಂದಲೇ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ 20 ಸಾವಿರ ಹಾಗೂ ರಾಜ್ಯದ ಇತರೆಡೆ 80 ಸಾವಿರ ಕಿಟ್‍ಗಳ ಬಳಕೆಗೆ ಸರ್ಕಾರ ತೀರ್ಮಾನಿಸಿದೆ.