ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ಅವರು ಹಂಚಿರುವ ಕುಕ್ಕರ್ ಹಿಂದಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡುನಿಂದ ಅದು ಅಕೀ ದುಡ್ಡಲ್ಲ,ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಾಗಿದೆ,ಈಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಅವರು ದುಡ್ಡು ಹಂಚುತ್ತಿರುವದು ನನ್ನ ಗಮನಕ್ಕೆ ಬಂದಿದೆ ,ಅವರು ಎಷ್ಟೇ ದುಡ್ಡು ಖರ್ಚು ಮಾಡಲಿ,ಅವರಗಿಂತ ಡಬಲ್ ದುಡ್ಡು ಖರ್ಚು ಮಾಡಲು ನಾನು ರೆಡಿ,ನಾನು ಖರ್ಚು ಮಾಡುವ ದುಡ್ಡು ಹರಾಮಿ ಅಲ್ಲ,ಸಾಲ ಮಾಡಿ ಖರ್ಚು ಮಾಡುತ್ತೇನೆ ಎಂದು,ಸಾಹುಕಾರ್ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಎಚ್ಚರಿಕೆ ಸಂದೇಶ ನೀಡಿದ್ರು
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಿಲ್ಲುತ್ತಿದ್ದು ಅವರು ಎಷ್ಟು ಹಣ ಖರ್ಚು ಮಾಡುತ್ತಾರೋ ಅದಕ್ಕಿಂತ ಡಬಲ್ ದುಡ್ಡು ನಾನು ಖರ್ಚು ಮಾಡುತ್ತೇನೆ ಎಂದು ಸಾಹುಕಾರ್ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು
2023 ರಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆ ಈ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜಪಿ ಝೇಂಡಾ ಹಾರಿಸುತ್ತೇನೆ,ಈ ಕ್ಷೇತ್ರದಲ್ಲಿ ಬಿಜೆಪಿ ಇತಿಹಾಸ ಸೃಷ್ಠಿ ಮಾಡುತ್ತೇನೆ,ಈ ಹಿಂದೆ ಸಂಜಯ ಪಾಟೀಲರಿಗೆ ನನ್ನಿಂದ ಅನ್ಯಾಯ ಆಗಿದೆ,ಮುಂದಿನ ದಿನಗಳಲ್ಲಿ ಅದನ್ನು ಸರಿ ಪಡಿಸುತ್ತೇನೆ.ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದ್ರೂ ಅವರನ್ನು ಗೆಲ್ಲಿಸುತ್ತೇನೆ,ಬಿಜೆಪಿ ಕಾರ್ಯಕರ್ತರೇ ನಮ್ಮ ಶಕ್ತಿ ಎಂದರು ರಮೇಶ್ ಜಾರಕಿಹೊಳಿ,
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ಸಂಚಲನ ಮೂಡಿಸಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಡಬಲ್ ದುಡ್ಡು ಖರ್ಚು ಮಾಡುವದಾಗಿ ಬಿಜೆಪಿ ಕಾರ್ಯಾಲಯದಲ್ಲೇ ವಾಗ್ದಾಣ ಮಾಡಿದ್ದಾರೆ,
Laxmi News 24×7