ಹುಕ್ಕೇರಿ : ನೇತ್ರ ದಾನ ಮಾಡಿ ಇಬ್ಬರ ಬಾಳಿಗೆ ಬೆಳಕಾಗಿ – ನಿಜಲಿಂಗೇಶ್ವರ ಮಹಾಸ್ವಾಮಿಜಿ.
ನೇತ್ರ ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಬೇಕು ಎಂದು ನಿಡಸೋಸಿ ಮಠದ ನಿಜಲಿಂಗೇಶ್ವರ ಮಹಾಸ್ವಾಮಿಜಿ ಹೇಳಿದರು.
ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ಸಂಕೇಶ್ವರ ನಗರದ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಮ್ಮಿಕೊಂಡ ಜಾಗ್ರತಾ ಜಾಥಾಕ್ಕೆ ನಿಡಸೋಸಿ ಮಠದ ನಿಜಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ಡಾಕ್ಟರ ಶೀಲಾ ದೋಡಬಂಗಿ ಲಕ್ಷ್ಮಿ ದೇವಿ ಮಂದಿರದ ಆವರಣದಲ್ಲಿ ಹಸೀರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಸ್ವಾಮಿಜಿಗಳು ಸಂಕೇಶ್ವರ ಬಾಗದಲ್ಲಿ ಎಂ ಎಂ ಜೋಶಿ ವಿಜ್ಞಾನ ಸಂಸ್ಥೆ ನೇತ್ರದಾನ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಂಡು ಸಾಕಷ್ಟು ಅಂದರ ಬಾಳಿಗೆ ಬೆಳಕಾಗುತ್ತಿದ್ದಾರೆ ಕಾರಣ ನಮ್ಮ ಮರಣದ ನಂತರ ಇಬ್ಬರ ಬಾಳಿಗೆ ಬೆಳಕಾಗಬೇಕಾದರೆ ನಮ್ಮ ಜೀವಿತ ಅವಧಿಯಲ್ಲಿ ನೇತ್ರದಾನಕ್ಕೆ ಸಮ್ಮತಿ ನೀಡಬೇಕು ಎಂದರು
ಜಾಥಾದಲ್ಲಿ ಎಸ್ ಡಿ ವಿ ಎಸ್ ಸಂಘದ ಅನ್ನಪೂರ್ಣ ಇನ್ ಶೂಟ್ ಆಪ್ ನರ್ಸಿಂಗ ಮತ್ತು ಎಸ್ ಎಸ್ ಆರ್ಟ್ಸ್ ಕಾಲೇಜ್ ಟಿಪಿ ಸೈನ್ಸ್ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿ ನೇತ್ರದಾನದ ಮಹತ್ವ ಸಾರುವ ನಾಮ ಫಲಕ ಮತ್ತು ಘೋಷನೆಗಳೊಂದಿಗೆ ಗಾಂಧಿ ಚೌಕ ಮೂಲಕ ಬಝಾರ ರಸ್ತೆ ಮಾರ್ಗವಾಗಿ ಹಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಲ ಕಾಲ ಕಣ್ಣಿನ ಮಹತ್ವ ಕುರಿತು ಅಣುಕು ಪ್ರದರ್ಶನ ಮಾಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿವೇಕ್ ಮೊಳಕೇರಿ ಪ್ರತಿ ವರ್ಷ ಅಗಷ್ಟ 25 ರಂದ ಸೆಪ್ಟೆಂಬರ್ 8 ರ ವರೆಗೆ ರಾಷ್ಟ್ರೀಯ ಕಾರ್ಯಕ್ರಮವಾಗಿ ನೇತ್ರದಾನ ಕುರಿತು ಅಭಿಯಾನ ಹಮ್ಮಿಕೊಂಡು ಕಣ್ಣಿನ ಮಹತ್ವ ಮತ್ತು ಅದರ ದಾನದಿಂದ ದೃಷ್ಟಿ ಹಿನರಿಗೆ ದೃಷ್ಟಿ ನೀಡುವ ಉದ್ದೇಶದಿಂದ ಜಾಗ್ರತೆ ಜಾಥಾ ಹಮ್ಮಿಕೋಳ್ಳಲಾಗುತ್ತದೆ ಎಂದರು
ನಂತರ ಸಂಸ್ಥೆಗೆ ಪ್ರಥಮವಾಗಿ ನೇತ್ರದಾನಕ್ಕೆ ಸಮ್ಮತಿಸಿದ ಡಾ, ಶೀಲಾ ದೊಡಬಂಗಿ ಯವರಿಗೆ ಶ್ರೀಗಳು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಪಿ ಬಿ ಬುರ್ಜಿ ಸೇರಿದಂತೆ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.