Breaking News

ಧಾರವಾಡದಲ್ಲಿ ಬೀದಿಗೆ ಇಳಿದ ನರೇಗಾ ಗುತ್ತಿಗೆ ನೌಕರರು… ಸೇವಾ ಭದ್ರತೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.

Spread the love

ಧಾರವಾಡದಲ್ಲಿ ಬೀದಿಗೆ ಇಳಿದ ನರೇಗಾ ಗುತ್ತಿಗೆ ನೌಕರರು… ಸೇವಾ ಭದ್ರತೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.
ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನರೇಗಾ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ, ಸಕಾಲಕ್ಕೆ ವೇತನ‌ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ನರೇಗಾ ಗುತ್ತಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.‌
ಕರ್ನಾಟಕ ರಾಜ್ಯ ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದರಣಿ ಸತ್ಯಾಗ್ರಹ ನಡೆಸಿದ ಗುತ್ತಿಗೆ ನರೇಗಾ ನೌಕರರು ಸರ್ಕಾರಗಳ ವಿರುದ್ಧ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ನರೇಗಾ ಯೋಜನೆಯಡಿ ಸುಮಾರು 3 ಸಾವಿರಕ್ಕೂ ಅಧಿಕ ಗುತ್ತಿಗೆ ಆಧಾರದ ಮೇಲೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.‌ ಆದರೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಕಾಲಕ್ಕೆ ಸಂಬಳ‌ ಸಿಗುತ್ತಿಲ್ಲ.
ಇದರಿಂದಾಗಿ ನರೇಗಾ ಗುತ್ತಿಗೆ ನೌಕರರು ಕುಟುಂಬ ಸಂಕಷ್ಟಕ್ಕೆ ಸಿಲುಕುವುದರ ಜತೆಗೆ ಬೀದಿಗೆ ಬರೋ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಈ ಕೂಡಲೇ ಬಾಕಿ ವೇತನ, ಜೀವಾ ವಿಮೆ, ಸೇವಾ ಭದ್ರತೆ ಹಾಗೂ ಸಕಾಲಕ್ಕೆ ಸಂಬಳ ಸೇರಿ ನರೇಗಾ ನೌಕರರ ಕಾಯಂ ಮಾಡುವುದರೊಂದಿಗೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಿಸುವುದಾಗಿ ಎಚ್ಚರಿಕೆ ನೀಡಿದರು.

Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ