ಬೆಳಗಾವಿ : ಪಂಥ ಬಾಳೆಕುಂದ್ರಿಯಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿಗಾಗಿ ತಿರಂಗಾ ಯಾತ್ರಾ
ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕು ಪಂಥ ಬಾಳೆಕುಂದ್ರಿಯಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಪಿ ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಭಾರತ ದೇಶಕ್ಕೆ ಹೆಮ್ಮೆ ತಂದಿರುವ ವೀರಸೇನಾನಿಗಳನ್ನು ಬೆಂಬಲಿಸಿ ಬೆಳಗಾವಿ ತಾಲೂಕು ಸಾಂಬ್ರಾದಿಂದ ಪಂಥಬಾಳೆಕುಂದ್ರಿಯವರೆಗೆ ಸಾಗಿ ಪ್ರಮುಖ ಬೀದಿಗಳಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು ಭಾರತ್ ಮಾತಾ ಕಿ ಜೈ, ವೀರ ಯೋಧರಿಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು, ಗ್ರಾಮದ ತುಂಬಾ ತ್ರಿವರ್ಣ ಧ್ವಜಗಳು ರಾರಾಜಿಸಿದವು.
ತಿರಂಗಾ ಯಾತ್ರೆಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಪ್ಪ ತಳವಾರ, ಯುವ ಮುಖಂಡ ಚೇತನ್ ಅಂಗಡಿ, ಬಿಜೆಪಿ ಮಂಡಲ ಅಧ್ಯಕ್ಷ ಯುವರಾಜ ಜಾಧವ್, ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂರ, ಎಲ್ಲೇಶ ಕೋಲ್ಕಾರ ಸೇರಿದಂತೆ ಇತರ ಮುಖಂಡರು ಗ್ರಾಮಸ್ಥರು ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.