ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಬಾಲ್ಯದಲ್ಲಿ ಕುಟುಂಬದ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಆ ದಿನಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ಹೇಳಿದ್ದಾರೆ.
ಸುದೀಪ್ ತಮ್ಮ ತಾಯಿ ಸರೋಜಾ, ಸಹೋದರಿಯರಾದ ಸುರೇಖಾ ಹಾಗೂ ಸುಜಾತಾ ಅವರೊಂದಿಗೆ ತೆಗೆಸಿಕೊಂಡ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈಗಿನ ದಿನಗಳಲ್ಲಿ ಕುಟುಂಬದ ಜೊತೆಗೆ ಇಂತಹ ಅಪರೂಪದ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕಷ್ಟವಾಗುತ್ತಿದೆ. ಆ ಗಳಿಗೆಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ” ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ವಿಶೇಷವೆಂದರೆ ಕಿಚ್ಚನ ತಂದೆ-ತಾಯಿ ಹಾಗೂ ಸಹೋದರಿಯರ ಹೆಸರು ಇಂಗ್ಲಿಷ್‍ನ ‘ಎಸ್’ ಅಕ್ಷರದಿಂದ ಪ್ರಾರಂಭವಾಗುತ್ತದೆ. ಸುಜಾತಾ-ಸಂಜೀವ್ ದಂಪತಿಯ ಮೊದಲ ಮಗಳು ಸುರೇಖಾ, ಎರಡನೇ ಸುಜಾತಾ ಕೊನೆಯ ಹಾಗೂ ಮೂರನೇ ಮಗ ಅಭಿಯನ ಚಕ್ರವರ್ತಿ ನಟ ಕಿಚ್ಚ ಸುದೀಪ್.
ಕೊರೊನಾ ವೈರಸ್ ಭೀತಿಯಿಂದಾಗಿ ಸಿನಿಮಾ ಚಿತ್ರೀಕರಣ ಸ್ತಬ್ಧವಾಗಿದ್ದು, ನಟ-ನಟಿ, ಕಲಾವಿದರು, ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ನಟ ಸುದೀಪ್ ಕೂಡ ಪತ್ನಿ ಹಾಗೂ ಮಗಳ ಜೊತೆಗೆ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ತಿಂಗಳ 20ರಂದು ಸಾನ್ವಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು.