Breaking News

  ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ ಖಂಡಿಸಿ  ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ  ಪ್ರತಿಭಟನೆ

Spread the love

ಬೆಳಗಾವಿ:  ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ ಖಂಡಿಸಿ  ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ  ಪ್ರತಿಭಟನೆ ನಡೆಸಿ ವಿಷ ಸೇವಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಜಿಲ್ಲಾಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದಿದ್ದಾನೆ.

ಹೊಸಕುರಗುಂದ ಗ್ರಾಮದ ನಿವಾಸಿ ಸಂಜು ನಾಯ್ಕರ್ ಮೃತ ದುರ್ದೈವಿ.  ಎರಡು ದಿನಗಳ ಹಿಂದೆ ಬೈಲಹೊಂಗಲ  ತಾಲೂಕಿನ ಹೊಸಕುರಗುಂದ ಗ್ರಾಮದಲ್ಲಿ ಅಕ್ರಮ ಸಂಬಂಧ ಶಂಕೆ ವ್ಯಕ್ತ ಪಡಿಸಿ   ಯುವಕನೊಬ್ಬನ ಕೊಲೆ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜುನ ಸಹೋದರ ಈರಪ್ಪ ಮತ್ತು ಕುಟುಂಬಸ್ಥರನ್ನು ಬಂಧಿಸಿದ್ದರು.

ಪೊಲೀಸರು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ನ್ಯಾಯ ಒದಗಿಸಿಕೊಡಿ ಎಂದು ನಿನ್ನೆ ಸಂಜು ಚನ್ನಮ್ಮ ವೃತ್ತದಲ್ಲಿ  ಪ್ರತಿಭಟನೆ ನಡೆಸುವ ವೇಳೆ ವಿಷ  ಸೇವಿಸಿದ್ದ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರದಿಂದ ವಿಶೇಷ ಅಧಿವೇಶನ ಕರೆದು ಕೇಂದ್ರದ ಯೋಜನೆಗೆ ಅಡ್ಡಗಾಲು: ಆರ್.ಅಶೋಕ್‌

Spread the loveಬೆಂಗಳೂರು: ಕಾಂಗ್ರೆಸ್  ಸರ್ಕಾರ ವಿಶೇಷ ಅಧಿವೇಶನ  ಕರೆದು ಕೇಂದ್ರ ಸರ್ಕಾರದ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ