ವಾಷಿಂಗ್ಟನ್/ನ್ಯೂಯಾರ್ಕ್, ಜೂ.25- ಡೆಡ್ಲಿ ಕೋವಿಡ್-19 ವೈರಸ್ ದಾಳಿಯಿಂದ ದಿಕ್ಕೆಟ್ಟಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 1.24 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 24.62 ಲಕ್ಷ ದಾಟಿದೆ.
ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,24,281 ಮಂದಿ ಮೃತಪಟ್ಟಿದ್ದು, 24,62,554 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.
ಇವರಲ್ಲಿ 16,500ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 10,40,606 ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ.
ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಆ ರಾಷ್ಟ್ರದಲ್ಲಿ ಸುಮಾರು 11.92 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 53,874ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಭಾರತ ಮತ್ತು ಬ್ರಿಟನ್ ದೇಶಗಳಿವೆ.
Laxmi News 24×7