2025 ಅನ್ನು ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಈ ವರ್ಷ ನಡೆದಿದ್ದೆಲ್ಲಾ ಕಹಿಗಳನ್ನು ಮರೆತು ಮುಂಬರುವ ವರ್ಷಗಳೆಲ್ಲಾ ಸಿಹಿಯನ್ನೇ ತರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ 2024ರಲ್ಲಿ ಒಳ್ಳೆಯ ಘಟನೆಗಳ ಜತೆಗೆ ಕೆಟ್ಟ ಘಟನೆಗಳೂ ಕೂಡ ನಡೆದಿವೆ. ಅದರಲ್ಲೂ ಸೈಕೋ ಕಿಲ್ಲರ್ಗಳು ನಡೆಸಿರುವ ಕೃತ್ಯಗಳು ಮನಸ್ಸಿಂದ ಮಾಸುವುದು ತುಂಬಾ ಕಷ್ಟ.
ಗೋವಾದಲ್ಲಿ ಸ್ವಂತ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ತಾಯಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಂಸ್ಥಾಪಕಿ ಮತ್ತು ಸಿಇಒ, 39 ವರ್ಷದ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮುಗ್ಧ ಮಗನನ್ನು ಕೊಲೆ ಮಾಡಿದ್ದಳು. ಮೊದಲು ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದಳು. ನಂತರ ಜನವರಿ 6 ರಂದು ರಾತ್ರಿ ಮಗುವನ್ನು ಹೋಟೆಲ್ ಕೊಠಡಿಯಲ್ಲಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಶವವನ್ನು ವಿಲೇವಾರಿ ಮಾಡಲು ಸೂಟ್‌ಕೇಸ್‌ನಲ್ಲಿಟ್ಟು ಬೆಂಗಳೂರಿಗೆ ವಾಪಸ್ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಡ್ರೈವರ್ನಿಂದಾಗಿ ಆಕೆ ಸಿಕ್ಕಿಬಿದ್ದಿದ್ದಳು. ಪತಿ ತನ್ನ ಮಗನನ್ನು ವಾರಕ್ಕೊಮ್ಮೆ ಭೇಟಿಯಾಗಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು, ಆದರೆ ಸುಚನಾಗೆ ಇದು ಇಷ್ಟವಾಗಲಿಲ್ಲ ಪತಿಯ ಮೇಲಿನ ಕೋಪದಿಂದ ಮಗುವನ್ನೇ ಕೊಂದಿದ್ದಳು. ಸದ್ಯ ಸೂಚನಾ ಸೇಠ್ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಸಂಜಯ್ ದತ್ ಅಭಿಮಾನಿ ಸೈಕೋ ಕಿಲ್ಲರ್ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಸಂಜಯ್ ದತ್ ಅಭಿಮಾನಿ ಎಂದು ಹೇಳಿಕೊಳ್ಳುವ ಅದ್ನಾನ್ ಅಲಿಯಾಸ್ ಬಲ್ಲು ಮದುವೆಯಾಗಿದ್ದರೂ ಬೇರೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಮಹಿಳೆಗೂ ವಿವಾಹವಾಗಿತ್ತು, ಆದರೆ ಅಷ್ಟರಲ್ಲಿ ತನ್ನ ಗೆಳತಿ ಕೂಡ ಬೇರೆ ಗಂಡಸರ ಜೊತೆ ಮಾತನಾಡುತ್ತಾಳೆ ಎಂದು ತಿಳಿದು ಕಂಗಾಲಾಗಿದ್ದ, ತನ್ನ ಗೆಳತಿಯನ್ನು ಸ್ಮಶಾನದಲ್ಲಿ ಭೇಟಿಯಾಗಲು ಕರೆದಿದ್ದ, ನಂತರ ಆಕೆಯನ್ನು ಇಲ್ಲಿಯೇ ಕೊಲೆ ಮಾಡಿದ್ದ, ಪೊಲೀಸರು ತನಿಖೆ ನಡೆಸಿದಾಗ ಸರಿಯಾಗಿ ಉತ್ತರಿಸಲಿಲ್ಲ, ಬಳಿಕ ಪೊಲೀಸರಿಗೆ ಅನುಮಾನ ಬಂದು ಸರಿಯಾಗಿ ವಿಚಾರಿಸಿದಾಗ ಒಪ್ಪಿಕೊಂಡಿದ್ದ, ಪೊಲೀಸರ ಬಳಿ ನಾನು ಸಂಜಯ್ ದತ್ ಅವರ ಅಭಿಮಾನಿ. ನನಗೆ ಮೋಸ ಇಷ್ಟವಿಲ್ಲ ಎಂದಿದ್ದ.