ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವೈದ್ಯರು, ಓರ್ವ ವಕೀಲ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರದ ವಿಡಪನಕಲ್ ಬಳಿ ನಡೆದಿದೆ.
ಬಳ್ಲಾರಿ ಬಿಮ್ಸ್ ಆಸ್ಪತ್ರೆಯ ಡಾ. ಗೋವಿಂದರಾಜಲು, ಡಾ.ಯೋಗೇಶ್ ಹಾಗೂ ವಕೀಲ ವೆಂಕಟನಾಯ್ಡು ಮೃತ ದುರ್ದೈವಿಗಳು. ಘಟನೆಯಲ್ಲಿ ಮತ್ತೋರ್ವ ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯ ಅಮರೇಗೌಡ ಪಾಟೀಲ್ ಸ್ಥಿತಿ ಗಂಭೀರವಾಗಿದೆ.
ವಿದೇಶಿ ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರು ಬಳ್ಳಾರಿಗೆ ವಾಪಾಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
Laxmi News 24×7