ಬೆಳಗಾವಿ : ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನವು ಪೂರ್ಣಾವಧಿಯ ಅಧಿವೇಶನವಾದರೆ ಅದಕ್ಕೆ ಅರ್ಥ ಬರುತ್ತದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ 2006ರಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿವೇಶನ ನಡೆಸುವುದಕ್ಕೆ ಸ್ಥಳಾವಕಾಶ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟು, ಸಂಪೂರ್ಣ ಮುತುವರ್ಜಿವಹಿಸಿ ಯಶಸ್ವಿಯಾಗಲು ಕಾರಣೀಭೂತರಾಗಿರುವ ಡಾ.ಪ್ರಭಾಕರ ಕೋರೆ, ಅಧಿವೇಶನ ನಡೆಸುವ ಉದ್ದೇಶ ಈವರೆಗೂ ಯಶಸ್ವಿಯಾಗಲಿಲ್ಲ. ಈ ಭಾಗದ ಜನರ ಕನಸು ನನಸಾಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
Laxmi News 24×7