ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಾಗಿನಿಂದ ಮುಡಾ ಹಗರಣ (MUDA Scam) ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದು ರಾಜ್ಯದ ಮುಖ್ಯಮಂತ್ರಿಗಳ ಸುತ್ತ ಗಿರಕಿಹೊಡೆಯುತ್ತಿದ್ದು, ಇದೀಗ ಮತ್ತೆ ಸಿದ್ದರಾಮಯ್ಯ (Siddaramaiah) ಅವರಿಗೆ ಸಂಕಷ್ಟು ಎದುರಾಗುವ ಸಾಧ್ಯತೆ ಇದೆ.
ಏಕೆಂದರೆ ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ಲೋಕಯುಕ್ತ ನೋಟಿಸ್ ನೀಡಿದೆ.
ಮುಡಾ ನಿವೇಶನಗಳನ್ನು 50:50 ಅನುಪಾತದಲ್ಲಿ ಕಾನೂನು ಬಾಹಿರ ಸೈಟು ಹಂಚಿಕೆ ಮಾಡಿರುವ ಆರೋಪ ನಟೇಶ್ ಅವರ ಮೇಲಿದೆ. ಖುದ್ದು ಲೋಕಾಯುಕ್ತಕ್ಕೆ ವಿಚಾರಣೆಗೆ ಬರುವಂತೆ ಲೋಕ ಎಸ್ಪಿ ಉದೇಶ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.
Laxmi News 24×7