Breaking News

ಅಭಿಷೇಕ್‌ ಬಚ್ಚನ್‌ – ಐಶ್ವರ್ಯಾ ರೈ ಮದುವೆ ಕುರಿತು ಮಾತನಾಡಿದ್ದ ಸಲ್ಮಾನ್‌ ಹಳೆ ವಿಡಿಯೋ ವೈರಲ್

Spread the love

ಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿರುವ ಐಶ್ವರ್ಯಾ ರೈ, ಈ ಹಿಂದೆ ಸಲ್ಮಾನ್ ಖಾನ್ ಅವರೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿತ್ತು. ಐಶ್ವರ್ಯಾ ಮತ್ತು ಸಲ್ಮಾನ್ ತಮ್ಮ ಸಂಬಂಧವನ್ನು 2002 ರಲ್ಲಿ ಕೊನೆಗೊಳಿಸಿದರು ಎಂಬ ಮಾತುಗಳಿವೆ. ಇಬ್ಬರೂ ತಮ್ಮ ಡೇಟಿಂಗ್ ಜೀವನದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದಿದ್ದರೂ, ಸಲ್ಮಾನ್ ಒಮ್ಮೆ ʼ ಆಪ್ ಕಿ ಅದಾಲತ್‌ʼ ನಲ್ಲಿ ಅಭಿಷೇಕ್ ಜೊತೆ ಐಶ್ವರ್ಯಾ ಅವರ ಮದುವೆಯ ಬಗ್ಗೆ ಮಾತನಾಡಿದ್ದು, ಈ ಹಳೆ ವಿಡಿಯೋ ಈಗ ಮತ್ತೆ ವೈರಲ್‌ ಆಗಿದೆ.

 

ಈ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರನ್ನು, ಐಶ್ವರ್ಯಾ ರೈ ನಿಂದನೆ ಮಾಡಿದ್ದರು ಹಾಗೂ ಇದೇ ಕಾರಣಕ್ಕೆ ಇಬ್ಬರ ನಡುವೆ ಬಿರುಕು ಮೂಡಿತ್ತು ಎಂಬ ಆರೋಪದ ಬಗ್ಗೆ ಪ್ರಶ್ನಿಸಿದಾಗ ಸಲ್ಮಾನ್ ಅದನ್ನು ನಯವಾಗಿ‌ ನಿರಾಕರಿಸಿ, “ನಿಮ್ಮ ವೈಯಕ್ತಿಕ ಜೀವನ ವೈಯಕ್ತಿಕವಾಗಿರಬೇಕು ಎಂದು ನಾನು ಬಯಸುತ್ತೇನೆ” ಎಂದಿದ್ದರು.

ಅಭಿಷೇಕ್‌ ಬಚ್ಚನ್‌ ಜೊತೆಗಿನ ಐಶ್ವರ್ಯಾ ಅವರ ಮದುವೆಯ ಬಗ್ಗೆ ಕೇಳಿದಾಗ “ಮೌನವಾಗಿರುವುದು ಉತ್ತಮ ಕೆಲಸ. ಈಗ ಅವರು ಒಬ್ಬರ ಹೆಂಡತಿ, ದೊಡ್ಡ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ಆಕೆ ಅಭಿಷೇಕ್ ಜೊತೆ ಮದುವೆಯಾಗಿರುವುದು ನನಗೆ ತುಂಬಾ ಖುಷಿ ತಂದಿದೆ. ನನ್ನ ಪ್ರಕಾರ ಅಭಿಷೇಕ್ ಒಬ್ಬ ಮಹಾನ್ ವ್ಯಕ್ತಿ. ಯಾವುದೇ ಮಾಜಿ ಗೆಳೆಯ ಬಯಸುವ ಅತ್ಯುತ್ತಮ ವಿಷಯ ಇದು. ನಿಮ್ಮ ಸ್ನೇಹ ಮುಗಿದ ನಂತರ, ನೀವು ಇಲ್ಲದೆ ಆ ವ್ಯಕ್ತಿ ದುಃಖಿತರಾಗಲು ಬಯಸುವುದಿಲ್ಲ. ನೀವು ಇಲ್ಲದೆ ಆ ವ್ಯಕ್ತಿ ಸಂತೋಷವಾಗಿರಲು ನೀವು ಬಯಸುತ್ತೀರಿ “ಎಂದು ಅವರು ಹೇಳಿದ್ದರು.

ಕುತೂಹಲಕಾರಿಯಾಗಿ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವೈವಾಹಿಕ ಜೀವನದಲ್ಲಿ ಏರುಪೇರಾಗಿದೆ ಎಂಬ ವದಂತಿಗಳ ಸಮಯದಲ್ಲಿ ಸಲ್ಮಾನ್‌ ಸಂದರ್ಶನದ ಹಳೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ