ಬೆಂಗಳೂರು, ನವೆಂಬರ್ 14: ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗಿದ್ದು, ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಬಂಗಾರದ ದರ ಇಂದು ಭಾರೀ ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಬಂಗಾರದ ದರ ರೂಪಾಯಿ 69,350 ಆಗಿದ್ದು, ರೂ.1,100 ಇಳಿಕೆಯಾಗಿದೆ.
ಚಿನ್ನದ ಬೆಲೆ ಇಂದು (ಗುರುವಾರ) ಗ್ರಾಮ್ಗೆ 110 ರೂನಷ್ಟು ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ 120 ರೂನಷ್ಟು ಇಳಿದಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 435 ರೂನಷ್ಟು ಕುಸಿತ ಕಂಡಿದೆ. ಅಂದರೆ, ಕಿಲೋಗೆ 4 ಲಕ್ಷ ರೂಗೂ ಅಧಿಕ ಮೊತ್ತದಷ್ಟು ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 69,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 75,650 ರುಪಾಯಿ ಆಗಿದೆ.ಹಾಗಾದರೇ ವಿವಿಧ ನಗರದಲ್ಲಿ ನವೆಂಬರ್ 14 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ನವೆಂಬರ್ 14 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,350 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,650 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,740 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,350 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,650 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 69,350 ರೂ
ಚೆನ್ನೈ: 69,350 ರೂ
ಮುಂಬೈ: 69,350 ರೂ
ದೆಹಲಿ: 69,500 ರೂ
ಕೋಲ್ಕತಾ: 69,350 ರೂ
ಕೇರಳ: 69,350 ರೂ
ಅಹ್ಮದಾಬಾದ್: 69,400 ರೂ
ಜೈಪುರ್: 69,500 ರೂ
ಲಕ್ನೋ: 69,500 ರೂ
ಭುವನೇಶ್ವರ್: 69,350 ರೂ