Breaking News

ಚಿಕ್ಕೋಡಿ: ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನ ಆಚರಣೆ

Spread the love

ಚಿಕ್ಕೋಡಿ: ‘ಲಿಂಗಾಯತ ಸಮಾಜ ಉಚಿತವಾಗಿ ಅನ್ನದಾಸೋಹ ಮಾಡುವ ಮೂಲಕ ಹೆಸರಾಗಿದ್ದು, ಕೆಎಲ್‌ಇ ಸಂಸ್ಥೆ 300ಕ್ಕೂ ಹೆಚ್ಚು ಅಂಗ ಸಂಸ್ಥೆಗಳ ಮೂಲಕ ನಾಡಿಗೆ ಜ್ಞಾನ ದಾಸೋಹ ಮಾಡುತ್ತಿದೆ’ ಎಂದು ಸಾಹಿತಿ ರಾಮಕೃಷ್ಣ ಮರಾಠೆ ಹೇಳಿದರು.

ಪಟ್ಟಣದ ಬಿ.ಕೆ ಕಾಲೇಜಿನಲ್ಲಿ ಹಮ್ಮಿಕೊಂಡ 109ನೇ ಕೆಎಲ್‌ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ‘ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆಯಲ್ಲಿ ಕೆಎಲ್‌ಇ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ದೇಶ ವಿದೇಶಗಳಲ್ಲಿ ನೀಡುತ್ತಿದೆ’ ಎಂದರು.

 

ಕಾಲೇಜಿನ ಪ್ರಾಚಾರ್ಯ ಬಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿ, ‘ಸಪ್ತ ಋಷಿಗಳ ಪರಿಶ್ರಮದಿಂದ ಕಟ್ಟಿದ ಕೆಎಲ್‌ಇ ಸಂಸ್ಥೆಯು, ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪ್ರಯತ್ನದಿಂದ ಹೆಮ್ಮರವಾಗಿ ಬೆಳೆದಿದೆ’ ಎಂದರು.

ಕಾರ್ಯಕ್ರಮದಲ್ಲಿ ಎನ್.ಎಸ್.ವಂಟಮುತ್ತೆ, ದರ್ಶನ ಬಿಳ್ಳೂರ, ಪಿ.ಬಿ ಕೋಳಿ ಇದ್ದರು.


Spread the love

About Laxminews 24x7

Check Also

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸದಿದ್ದರೆ ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್

Spread the loveಚಿಕ್ಕೋಡಿ(ಬೆಳಗಾವಿ): ಕಬ್ಬಿಗೆ ಸೂಕ್ತ ದರ ನೀಡುವಂತೆ ಕಳೆದ ಏಳು ದಿನಗಳಿಂದ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ