Breaking News

ಅರಭಾವಿ ತೋಟಗಾರಿಕೆ ಕಾಲೇಜಿಗೆ ರನ್ನರ್‌ ಅಪ್‌ ಪ್ರಶಸ್ತಿ

Spread the love

ಮೂಡಲಗಿ: ಬೀದರ್‌ನಲ್ಲಿ ಇತ್ತೀಚೆಗೆ ಜರುಗಿದ 15ನೇ ತೋಟಗಾರಿಕೆ ಮಹಾವಿದ್ಯಾಲಯದ ಯುವಜನೋತ್ಸವ-2024ರಲ್ಲಿ ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯವು ರನ್ನರ್‌ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ಮಹಾವಿದ್ಯಾಯದ ವಿದ್ಯಾರ್ಥಿಗಳು ಏಕಪಾತ್ರಾಭಿನಯ, ಮೈಮ್‌, ಸ್ಕಿಟ್‌, ಕಾರ್ಟೂನ್‌ ಬಿಡಿಸುವುದು, ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ, ಲಘು ಗಾಯನ, ಸ್ಥಳದಲ್ಲಿ ಚಿತ್ರ ಬಿಡಿಸುವುದು, ತೇಪೆ ಚಿತ್ರಗಾರಿಕೆ ದ್ವಿತೀಯ ಸ್ಥಾನ ಹಾಗೂ ಜಾನಪದ ಹಾಡು, ಏಕಾಂಕ ನಾಟಕ, ಪೋಸ್ಟರ್ ತಯಾರಿಕೆ, ಎಕ್ಸ್ಟೊಂಬರ್ ತೃತೀಯ ಸ್ಥಾನ ಹಾಗೂ ಭಾಷಣ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಕಾಲೇಜಿಗೆ ಹೆಸರು ತಂದಿದ್ದಾರೆ ಎಂದು ತಿಳಿಸಿದ್ದಾರೆ.

 

ಮಹಾವಿದ್ಯಾಲಯದ ಡೀನ್‌ ಡಾ.ಎಂ.ಜಿ.ಕೆರುಟಗಿ ಅವರು ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡಿದ ದಿಲೀಪಕುಮಾರ ಮಸೂತಿ, ಪ್ರತೀಕ್ಷಾ ಮತ್ತು ರಾಘವೇಂದ್ರ ಕೆ.ಎಸ್ ಅವರನ್ನು ಅಭಿನಂದಿಸಿದ್ದಾರೆ.


Spread the love

About Laxminews 24x7

Check Also

ಶಿವಶಂಕರಪ್ಪರಿಗೆ ಮುಂದುವರಿದ ಚಿಕಿತ್ಸೆ, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್​: ವದಂತಿ ಬಗ್ಗೆ ಪುತ್ರ ಆಕ್ರೋಶ

Spread the loveದಾವಣಗೆರೆ: ಹಿರಿಯ ಶಾಸಕ ಹಾಗೂ ಅಖಿಲ ಭಾರತೀಯ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅನಾರೋಗ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ