ಹಾವೇರಿ : ಮುಂದಿನ ತಿಂಗಳು ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.ಇಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಅವರು ಮಾತನಾಡಿ, ನಾವು ಗೆಲುವಿನ ಅಂತರ ನೋಡುತ್ತಿಲ್ಲ.
ಗೆಲುವು ಮಾತ್ರ ನೋಡುತ್ತಿದ್ದೇವೆ ಎಂದು ತಿಳಿಸಿದರು.
ಈ ಬಾರಿ ಶಿಗ್ಗಾವಿಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ನೀಡಿದರು.ಯಾಸಿರ್ ಪಠಾಣ್ ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಬಹಳ ಮಾತನಾಡಿದ್ದರು. 3 ಲಕ್ಷ 4 ಲಕ್ಷ ಲೀಡ್ ನಿಂದ ಗೆಲ್ಲುತ್ತೇವೆ ಅಂದರು ಏನಾಯ್ತು? ಎಂದರು.
ಗ್ಯಾರಂಟಿ ಯೋಜನೆಗಳಿಂದಾಗಿ 9 ಸೀಟುಗಳನ್ನು ನಾವು ಗೆದ್ದಿದ್ದೇವೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದವರು ಬಿಜೆಪಿಯವರು.ಈಗ ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ಗೆಲುವಿನ ಅಂತರ ನೋಡುತ್ತಿಲ್ಲ ಗೆಲುವು ಮಾತ್ರ ನೋಡುತ್ತಿದ್ದೇವೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ತಿಳಿಸಿದರು.
Laxmi News 24×7