Breaking News

ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ ಹಣ್ಣು

Spread the love

ಬಕವಿ-ಬನಹಟ್ಟಿ: ತಾಲೂಕಿನ ಜಗದಾಳ ಗ್ರಾಮದ ರೈತರಾದ ಶ್ರೀನಾಥ ದೇವರಾಜ ರಾಠಿ ನಾಲ್ಕು ಎಕರೆ ತೋಟದಲ್ಲಿ ಬೆಳೆದ ಬಾಳೆ ಹಣ್ಣುಗಳು ಇಂದು ಇರಾನ ದೇಶಕ್ಕೆ ರಫ್ತಾಗುತ್ತಿವೆ. ಮುಂಬೈನಿಂದ ಬಂದ ಕಾರ್ಮಿಕರು ಬಾಳೆ ಹಣ್ಣಿನ ಗೊನೆಗಳನ್ನು ಕಡಿದು ತಂದು ಅವುಗಳನ್ನು ಶುಚಿಗೊಳಿಸಿ, ನಂತರ ಪ್ಲಾಸ್ಟಿಕ್ ಪೇಪರ್ ನಲ್ಲಿ ಪ್ಯಾಕ್ ಮಾಡಿ ವಾಹನಕ್ಕೆ ತುಂಬುವ ಕಾರ್ಯ ಮಾಡುತ್ತಿರುವುದು ಕಂಡು ಬಂತು.

 

ದೇವರಾಜ ರಾಠಿಯವರ ಮಗ ಶ್ರೀನಾಥ ಕೃಷಿಯಲ್ಲಿ ಬಿ ಎಸ್ ಸಿ ಪದವಿಧರರು. ತಂದೆಯ ಮಾರ್ಗದರ್ಶನದಲ್ಲಿ ಬಾಳೆ ಹಣ್ಣುಗಳನ್ನು ಬೆಳೆದಿದ್ದಾರೆ.

ನಾಲ್ಕು ಎಕರೆಯಲ್ಲಿ ಜೈನ ಕಂಪನಿಯ ಜಿ-9 ತಳಿಯ 7200 ಗಿಡಗಳನ್ನು ಹಚ್ಚಲಾಗಿದ್ದು, ಒಂದು ಗಿಡಕ್ಕೆ ಅಂದಾಜು 28 ರಿಂದ 30 ಕೆ.ಜಿಯಷ್ಟು ಬಾಳೆ ಹಣ್ಣು ಬರುತ್ತದೆ. ಸದ್ಯ ಒಂದು ಕೆ.ಜಿಗೆ ರೂ. 23 ರಂತೆ ಖರೀದಿ ಮಾಡುತ್ತಿದ್ಧಾರೆ. ಒಂದು ಸಸಿಗೆ ಇಲ್ಲಿಯವರೆಗೆ ಅಂದಾಜು ರೂ. 150 ರಿಂದ 200 ಖರ್ಚು ಮಾಡಲಾಗಿದೆ.


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ