ಕಿತ್ತೂರು: ಇಲ್ಲಿಯ ಕೋಟೆ ಆವರಣದಲ್ಲಿ ಆಯೋಜಿಸಿದ ‘ಚನ್ನಮ್ಮನ ಕಿತ್ತೂರು ಉತ್ಸವ’ದ ಮೊದಲ ದಿನವೇ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಜನಸಾಗರವೇ ಹರಿದು ಬಂತು.
‘ಮೊದಲ ದಿನವಾಗಿದ್ದರಿಂದ ಕೊಳ್ಳುವವರಿಗಿಂತ ನೋಡುವವರೆ ಹೆಚ್ಚಾಗಿದ್ದಾರೆ. ಇನ್ನು ಮೇಲೆ ವ್ಯಾಪಾರ ಆಗಬೇಕಷ್ಟೆ’ ಎಂದು ವರ್ತಕರು ಹೇಳಿದರು.
‘ಗ್ರಾಮೀಣ ಭಾಗದ ಉತ್ಪಾದಕರು ತಾವು ಸಿದ್ದಪಡಿಸಿದ್ದ ಆಹಾರ ಪದಾರ್ಥ, ಮತ್ತಿತರ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮಳಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇದನ್ನು ಜನರು ಉಪಯೋಗಿಸಿಕೊಳ್ಳಬೇಕು’ ಎಂಬುದು ಕೈಗಾರಿಕೆ ಇಲಾಖೆಯ ಸಲಹೆ.
‘ಮಳಿಗೆಯಲ್ಲಿ ಆಧುನಿಕ ಕೃಷಿ ಉಪಕರಣ, ಹೊಸತಳಿ, ಹೆಚ್ಚು ಇಳುವರಿ ನೀಡುವ ಬಿತ್ತನೆ ಬೀಜ, ಹೊಸ ಕಬ್ಬಿನ ತಳಿ, ಹನಿ, ತುಂತುರ ನೀರಾವರಿ, ತೋಟಗಾರಿಕೆ ಕೃಷಿಗೆ ಬಳಸುವ ಕೆಲವು ಉಪಕರಣಗಳನ್ನು ಪರಿಚಯಿಸಲು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕೃಷಿ ಇಲಾಖೆ ಸಹಾಯಧನ ಅಡಿ ದೊರೆಯುವ ವಸ್ತುಗಳೇ ಇವುಗಳಲ್ಲಿ ಹೆಚ್ಚಾಗಿವೆ ಎಂದು ಸುಬಾನಿ ಮುಲ್ಲಾ ತಿಳಿಸಿದರು.
Laxmi News 24×7