Breaking News

ಮಹಾರಾಷ್ಟ್ರ ಚುನಾವಣೆ: ಬೆಳಗಾವಿಯಲ್ಲಿ ದಾಖಲೆ ಇಲ್ಲದ ₹2.73 ಕೋಟಿ ಹಣ ವಶ

Spread the love

ಬೆಳಗಾವಿ: ದಾಖಲೆಗಳಿಲ್ಲದೇ ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ₹2.73 ಕೋಟಿ ಹಣವನ್ನು ಬೆಳಗಾವಿ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್‌ ವಾಹನದಲ್ಲಿ ಈ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನಗರ ಪೊಲೀಸ್‌ ಆಯುಕ್ತಾಲಯಕ್ಕೆ ದೊರೆತಿತ್ತು.

ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮಾರ್ಗದರ್ಶನದಲ್ಲಿ, ಸಿಸಿಬಿ ಇನ್‌ಸ್ಪೆಕ್ಟರ್‌ ನಂದೀಶ್ವರ ಕುಂಬಾರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ನಿಂತರು.

ಗೂಡ್ಸ್‌ ವಾಹನದ ಕ್ಯಾಬಿನ್‌ ಭಾಗವನ್ನು ತುಸು ಮಾರ್ಪಾಡು ಮಾಡಿ, ಅದರಡಿ ಹಣ ಬಚ್ಚಿ ಇಡಲಾಗಿತ್ತು. ವಾಹನದ ಒಳಭಾಗ ಪರಿವರ್ತನೆ ಮಾಡಿದ್ದರಿಂದ ಅನುಮಾನ ಬಂದು ತಪಾಸಣೆ ಮಾಡಿದ ಪೊಲೀಸರಿಗೆ ₹500 ಮುಖಬೆಲೆಯ ಕಂತೆಕಂತೆ ಹಣ ಸಿಕ್ಕಿತು.

ವಾಹನವನ್ನು ಮಹಾರಾಷ್ಟ್ರದ ಸಾಂಗಲಿ ನಗರದಿಂದ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ಬಂಧಿತರು ಬಾಯಿ ಬಿಟ್ಟಿದ್ದಾರೆ. ವಾಹನ ಚಾಲಕ ಸಾಂಗಲಿಯ ಸಚಿನ್ ಮೇಬಕುದಳಿ, ಕ್ಲೀನರ್‌ ಮಾರುತಿ ಮಾರಗುಡೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ

Spread the loveಚಿಕ್ಕೋಡಿ: “ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ