Breaking News

ಹಾಲಿನ ಪುಡಿ ಬಿಕರಿಗೆ ಗ್ರಹಣ: ಗೋದಾಮಿನಲ್ಲಿ ಉಳಿದ 3,854 ಕ್ವಿಂಟಲ್‌ ದಾಸ್ತಾನು

Spread the love

ಧಾರವಾಡ/ ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಂದ ಪೂರೈಸಿದ ಹಾಲಿನಿಂದ ತಯಾರಿಸಿದ್ದ 3,854 ಕ್ವಿಂಟಲ್‌ ಕೆನೆರಹಿತ ಹಾಲಿನ ಪುಡಿ ಮಾರಾಟವಾಗದೆ ಧಾರವಾಡ ಜಿಲ್ಲಾ ಹಾಲು ಒಕ್ಕೂಟದ (ಧಾಮುಲ್‌) ಗೋದಾಮಿನಲ್ಲಿಯೇ ಉಳಿದಿದೆ.

ಒಕ್ಕೂಟಗಳಿಗೆ ಪೂರೈಸುವ ಹಾಲು ಮಾರಾಟ ಮಾಡಿದ ನಂತರವೂ ಉಳಿಯುವ ಹಾಲಿನಿಂದ ಈ ಕೆನೆರಹಿತ ಪುಡಿ ತಯಾರಿಸಲಾಗುತ್ತಿದೆ.

ಹಾಲಿನ ಕೊರತೆ ಎದುರಿಸುತ್ತಿದ್ದ ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳ ಡೇರಿಗಳು ಟೆಂಡರ್ ಪ್ರಕ್ರಿಯೆ ಮೂಲಕ ಈ ಪುಡಿ ಖರೀದಿಸುತ್ತಿದ್ದವು. ಕೆಲವೊಮ್ಮೆ ವಿದೇಶಕ್ಕೂ ರಫ್ತಾಗುತ್ತಿತ್ತು. ಕೆ.ಜಿಗೆ ₹250ರಿಂದ ₹300ರ ವರೆಗೆ ದರ ಇರುತ್ತಿತ್ತು.

ಆದರೆ, ಈ ಬಾರಿ ವಿವಿಧ ರಾಜ್ಯಗಳಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣ ಹೆಚ್ಚಿದೆ. ಹಾಗಾಗಿ, ಹಾಲಿನ ಪುಡಿಗೆ ಬೇಡಿಕೆ ಕುಸಿದಿದ್ದು, ಈಗ ಕೆ.ಜಿಗೆ ₹215 ಇದೆ. ಹಾಗಾಗಿ, ದರ ಏರಬಹುದು ಎಂಬ ನಿರೀಕ್ಷೆಯಿಂದ ಹಲವು ತಿಂಗಳಿಂದ ಧಾರವಾಡದ ಗೋದಾಮಿನಲ್ಲೇ ಪುಡಿ ದಾಸ್ತಾನು ಮಾಡಲಾಗಿದೆ. ನಿಗದಿತ ಅವಧಿಯೊಳಗೆ ಮಾರಾಟ ಮಾಡದಿದ್ದರೆ, ಅದು ಹಾಳಾಗುವ ಸಾಧ್ಯತೆಯೂ ಇದೆ.

‘ಪ್ರತಿದಿನ 300 ಕ್ವಿಂಟಲ್‌ ಹಾಲಿನ ಪುಡಿ ತಯಾರಿಕೆ ಸಾಮರ್ಥ್ಯದ ಘಟಕ ಧಾಮುಲ್‌ನಲ್ಲಿ ಇದೆ. ವಿವಿಧ ಹಾಲು ಒಕ್ಕೂಟದವರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಉಳಿದ ಹಾಲನ್ನು ಪುಡಿ ತಯಾರಿಕೆಗೆ ಇಲ್ಲಿಗೆ ರವಾನಿಸುತ್ತಾರೆ. ಕೆನೆರಹಿತ (ಎ‌ಸ್‌ಎಂಪಿ) ಮತ್ತು ಕೆನೆಭರಿತ (ಡಬ್ಲುಎಂಪಿ) ಹಾಲಿನ ಪುಡಿ ತಯಾರಿಸಲಾಗುತ್ತದೆ. ಕೆನೆಭರಿತ ಹಾಲಿನ ಪುಡಿ ಕ್ಷೀರಭಾಗ್ಯ ಯೋಜನೆಗೆ ಬಳಕೆಯಾಗುತ್ತದೆ’ ಎಂದು ಧಾಮುಲ್‌ ನಿರ್ದೇಶಕ ವೀರೇಶ್‌ ತರಲಿ ತಿಳಿಸಿದರು.


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ