ಸಿರವಾರ: ಪಟ್ಟಣದ ಲಿಂಗಸೂರು ಮುಖ್ಯರಸ್ತೆಯ ಬಂಗ್ಲೆ ಹಳ್ಳದ ಸಮೀಪ ರವಿವಾರ (ಸೆ.29) ಅನ್ನಭಾಗ್ಯದ ಅಕ್ಕಿಯ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ.
ರಾಯಚೂರಿನಿಂದ ಲಿಂಗಸೂರು ಕಡೆಗೆ ಹೊರಟಿದ್ದ ಅನ್ನಭಾಗ್ಯದ ಲಾರಿಯು ಬೈಕ್ ನಲ್ಲಿ ತೆರಳುತ್ತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಕೆ.ಗುಡದಿನ್ನಿ ಗ್ರಾಮದ ಚನ್ನಪ್ಪ (27) ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಗಂಭೀರ ಗಾಯಗೊಂಡಿರುವ ಚನ್ನಬಸವ ಎಂಬುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಸ್ಥಳಕ್ಕೆ ಸಿಪಿಐ ಶಶಿಕಾಂತ.ಎಂ, ಪಿಎಸ್‌ಐ ಅಮರೇಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ
Laxmi News 24×7