ಫ್ಲೋರಿಡಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿ ಗಾಲ್ಫ್ ಆಡುತ್ತಿದ್ದಾಗ ಮತ್ತೆ ಗುಂಡಿನ ದಾಳಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ರಯಾನ್ ವೆಸ್ಲಿ ರೌತ್ ಎಂದು ಗುರುತಿಸಲಾಗಿದೆ.
ಟ್ರಂಪ್ ನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದು ಇದು ಎರಡನೇ ಬಾರಿ. ಪಾಮ್ ಬೀಚ್ ಕೌಂಟಿ ಶೆರಿಫ್ ರಿಕ್ ಬ್ರಾಡ್ಶಾ ಮಾತನಾಡಿ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಟ್ರಂಪ್ನಿಂದ 300 ರಿಂದ 500 ಗಜಗಳ ನಡುವಿನ ಚೈನ್-ಲಿಂಕ್ ಬೇಲಿಯ ಬಳಿ ಶಂಕಿತನು ಅಡಗಿದ್ದಾನೆ ಎಂದು ಹೇಳಿದರು.
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿರುವ ಗಾಲ್ಫ್ ಕ್ಲಬ್ನಲ್ಲಿ ಭಾನುವಾರ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಪ್ರಯತ್ನ ನಡೆದಿದೆ ಎಂದು ಎಫ್ಬಿಐ ಹೇಳಿದೆ. ಅದೃಷ್ಟವಶಾತ್ ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಟ್ರಂಪ್ ಆಟವಾಡುತ್ತಿದ್ದ ಸ್ಥಳದಿಂದ ಸುಮಾರು 400 ಗಜಗಳಷ್ಟು ದೂರದಲ್ಲಿರುವ ಪೊದೆಗಳ ಮೂಲಕ ಗುಂಡು ಹಾರಿಸಲು ಯತ್ನಿಸಲಾಗಿದೆ.
Laxmi News 24×7