Breaking News

ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

Spread the love

ಕಿತ್ತೂರು: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಅಪಹರಣಕ್ಕೆ ಒಳಗಾದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರು ಕೊನೆಗೂ ಪತ್ತೆಯಾಗಿದ್ದಾರೆ.

ನಾಗರಾಜ ಅಸುಂಡಿ ಅವರನ್ನು ಬೈಲಹೊಂಗಲ ಕೋರ್ಟ್ ಗೆ ಹಾಜರುಪಡಿಸಲು ಪೊಲೀಸರು ಕರೆತಂದಿದ್ದಾರೆ.

 

ಸೆಪ್ಟೆಂಬರ್ 3 ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಸಂಖ್ಯಾಬಲ ಹೆಚ್ಚಿಸಿಕೊಂಡು ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ಮುಖಂಡರು ಅಪಹರಿಸಿದ್ದಾರೆ ಎಂದು ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಗರಾಜ ಅಸುಂಡಿ ಅವರನ್ನು ಅಪಹರಣ ಮಾಡಿದ್ದ ವಾಹನ ಬೆಂಗಳೂರು ರೆಸಾರ್ಟ್ ಬಳಿ ಪತ್ತೆಯಾಗಿತ್ತು.

ಬಿಜೆಪಿ ತಮ್ಮ ಪಕ್ಷದ ಸದಸ್ಯನನ್ನು ಅಪಹರಿಸಿದ ಬಗ್ಗೆ ತೀವ್ರ ಪ್ರತಿಭಟನೆ ನಡೆಸಿತ್ತು. ನಾಗರಾಜ ಅಸುಂಡಿ ಅವರ ತಾಯಿ ಸಹ ಮಗನ ಅಪಹರಣದಿಂದ ಬೇಸರಗೊಂಡು ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೂ ನಾಗರಾಜ ಅಸುಂಡಿ ಪತ್ತೆಯಾಗಿದ್ದರಿಂದ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ. ಸ್ವಪಕ್ಷದ ಪಟ್ಟಣ ಪಂಚಾಯತ್ ಸದಸ್ಯನ ಪರ ವಕಾಲತು ವಹಿಸಿದ ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಅವರು ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದು ಗಮನ ಸೆಳೆಯಿತು.         


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ